ADVERTISEMENT

ಬೀದರ್| ಅಂಗಾಕರ ಸಂಕಷ್ಟಿ; ಸಿದ್ಧಿ ವಿನಾಯಕನ ದರ್ಶನ ಪಡೆದ ಭಕ್ತರು

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 6:18 IST
Last Updated 7 ಜನವರಿ 2026, 6:18 IST
ಬೀದರ್ ನೆರೆಯ ತೆಲಂಗಾಣದ ರೇಜಂತಲ್‌ನ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಭಕ್ತರು ದುಂಡು
ಬೀದರ್ ನೆರೆಯ ತೆಲಂಗಾಣದ ರೇಜಂತಲ್‌ನ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಭಕ್ತರು ದುಂಡು   

ಬೀದರ್: ಅಂಗಾರಕ ಸಂಕಷ್ಟ ಚತುರ್ಥಿ ನಿಮಿತ್ತ ನೆರೆಯ ತೆಲಂಗಾಣದ ಜಹೀರಾಬಾದ್‌ ತಾಲ್ಲೂಕಿನ ರೇಜಂತಲ್‌ನಲ್ಲಿರುವ ಸಿದ್ಧಿ ವಿನಾಯಕ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಯಿತು. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು.

ಅಂಗಾರಕ ಸಂಕಷ್ಟ ಚತುರ್ಥಿಯ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೀದರ್‌, ತೆಲಂಗಾಣ, ಮಹಾರಾಷ್ಟ್ರದ ನಾನಾ ಕಡೆಯ ಭಕ್ತರು ಪಾದಯಾತ್ರೆಯ ಮೂಲಕ ಹಾಗೂ ವಾಹನಗಳ ಮೂಲಕ ರೇಜಂತಲ್‌ಗೆ ಆಗಮಿಸಿದ್ದರು.

ಮಂಗಳವಾರ ನಸುಕಿನ ಜಾವ ನಡೆದ ಕಾಕಡ ಆರತಿಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಮಂದಿರಕ್ಕೆ ಬರುವ ಭಕ್ತರು ಉಪವಾಸ ಆಚರಣೆ ಮಾಡುವುದರಿಂದ ದಾರಿಯ ಮಧ್ಯದ ಅಲ್ಲಲ್ಲಿ ಹಲವರು ಉಪಹಾರ ನೀಡಿದರು. 

ADVERTISEMENT

ದೇವರ ದರ್ಶನ ಪಡೆದ ಭಕ್ತರು ಪುಳಿಯೋಗರೆ ಸೇವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.