ADVERTISEMENT

ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಶ್ರಮಿಸಿ: ಶಾಸಕ ಅಶೋಕ ಖೇಣಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 11:16 IST
Last Updated 27 ಆಗಸ್ಟ್ 2021, 11:16 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲಕ್ಕೆ ಶುಕ್ರವಾರ ಮಾಜಿ ಶಾಸಕ ಅಶೋಕ ಖೇಣಿ ಭೇಟಿ ನೀಡಿ ದೇಗುಲದ ಪ್ರಗತಿ ಕುರಿತು ಚರ್ಚಿಸಿದರು
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲಕ್ಕೆ ಶುಕ್ರವಾರ ಮಾಜಿ ಶಾಸಕ ಅಶೋಕ ಖೇಣಿ ಭೇಟಿ ನೀಡಿ ದೇಗುಲದ ಪ್ರಗತಿ ಕುರಿತು ಚರ್ಚಿಸಿದರು   

ಚಾಂಗಲೇರಾ (ಚಿಟಗುಪ್ಪ): ‘ಪಕ್ಷ ಬಲವರ್ಧನೆಗೆ ಒಗ್ಗಟ್ಟು ಅಗತ್ಯ. ಮುಂಬರುವ ಜಿ.ಪಂ, ತಾ.ಪಂ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು’ ಎಂದು ಮಾಜಿ ಶಾಸಕ ಅಶೋಕ ಖೇಣಿ ತಿಳಿಸಿದರು.

ತಾಲ್ಲೂಕಿನ ಚಾಂಗಲೇರಾ ಗ್ರಾಮದ ವೀರಭದ್ರೇಶ್ವರ ದೇಗುಲದಲ್ಲಿ ದೇವರ ದರ್ಶನ ಪಡೆದು ನಂತರ ಬೇಮಳಖೇಡಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.

ನನ್ನ ಅಧಿಕಾರ ಅವಧಿಯಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಬೂತ್‌ ಮಟ್ಟದ ಪಕ್ಷದ ಕಾರ್ಯಕರ್ತರ ಮೇಲಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ADVERTISEMENT

ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ್‌ ಚನಶೆಟ್ಟಿ, ಕರೀಮ ಸಾಬ್‌ ಕಮಠಾಣ, ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ ಕಮಠಾಣ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನೂರೋದ್ದೀನ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಾಕಿರ್‌, ಸದಸ್ಯರಾದ ಸಿಕಿಂದರ್, ಭಾಸ್ಕರ, ಮುಖಂಡರಾದ ಮಹೆಬೂಬ್, ಬಾಬುರಾವ ಪಾಟೀಲ, ಸಿ.ವಿ ಪಾಟೀಲ, ಲಕ್ಷ್ಮಣ ಕಲಾಲ್,ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಶೋಕ , ಖಾಜಮಿಯ್ಯ, ರೇವಣಸಿದ್ದಯ್ಯ ಪೂಜಾರಿ, ಸುಭಾಷ ಆರಡ್ಡಿ, ಆನಂದ ಕಾರಪಾಕಪಳ್ಳಿ, ಅಶೋಕ ರಡ್ಡಿ ಪೊಲಕಪಳ್ಳಿ, ಬಸವರಾಜ ಪಾಟೀಲ, ಸಂತೋಷ ಪಾಟೀಲ, ಸಂತೋಷ ಕಮಲಪುರ, ರಾಜಕುಮಾರ ಮಡಕಿ, ಇಮ್ಯಾನವೇಲ್ ಹಾಗೂ ಶಿವಕುಮಾರ ಮುತ್ತಂಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.