ಔರಾದ್: ಹಾಲಿನಲ್ಲಿ ಕಲಬೆರಕೆ ಮಾಡುತ್ತಿರುವ ಶಂಕೆ ಮೇಲೆ ಕೆಎಂಎಫ್ ಅಧಿಕಾರಿಗಳು ಭಾನುವಾರ ತಾಲ್ಲೂಕಿನ ಖಂಡಿಕೇರಿ ಗ್ರಾಮದ ಹಾಲಿನ ಡೈರಿಯೊಂದರ ಮೇಲೆ ದಾಳಿ ಮಾಡಿದ್ದಾರೆ.
ಕೆಎಂಎಫ್ ನಿರ್ದೇಶಕ ಪಾಂಡುರಂಗ ಪಾಟೀಲ. ಸ್ಥಳೀಯ ಠಾಣೆ ಪಿಎಸ್ಐ ವಸೀಮ್ ಪಟೇಲ್ ತಂಡ ಅಶೋಕ ಎಂಬುವರ ಹಾಲಿನ ಡೈರಿ ಮೇಲೆ ದಾಳಿ ಮಾಡಿ ಐದು ಹಾಲಿನ ಪುಡಿ (ಮಿಲ್ಕ್ ಮಿಸ್ಟ್ ಪೌಡರ್) ಜಪ್ತಿ ಮಾಡಿಕೊಂಡಿದ್ದಾರೆ. ಜಪ್ತಿ ಮಾಡಿಕೊಂಡಿರುವ ಪುಡಿಯನ್ನು ಲ್ಯಾಬ್‌ಗೆ ಕಳುಹಿಸಲಾಗುವುದು. ವರದಿ ಬಂದ ನಂತರ ಕ್ರಮ ಜರುಗಿಸಲಾಗುತ್ತದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.