ADVERTISEMENT

ಔರಾದ್ | ಪಿಯು ಫಲಿತಾಂಶ: ಕೂಲಿ ಕಾರ್ಮಿಕನ ಮಗಳು ತಾಲ್ಲೂಕಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2025, 14:04 IST
Last Updated 9 ಏಪ್ರಿಲ್ 2025, 14:04 IST
ಸುಧಾರಾಣಿ ಸಂಗಪ್ಪ
ಸುಧಾರಾಣಿ ಸಂಗಪ್ಪ   

ಔರಾದ್: ತಾಲ್ಲೂಕಿನ ಗ್ರಾಮೀಣ ಭಾಗದ ಕೂಲಿ ಕಾರ್ಮಿಕನ ಪುತ್ರಿ ಸುಧಾರಾಣಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಸ್ಕಲ್ ಗ್ರಾಮದ ಕೂಲಿ ಕೆಲಸ ಮಾಡುವ ಸಂಗಪ್ಪ ಅವರ 3ನೇ ಪುತ್ರಿ ಸುಧಾರಾಣಿ ತಾಲ್ಲೂಕಿಗೆ ಪ್ರಥಮ ಬಂದಿದ್ದು, ಅವರ ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.

ಸಂತಪುರ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ಓದಿದ ಈ ವಿದ್ಯಾರ್ಥಿನಿ 581 ಅಂಕ (ಶೇ 96.83) ಪಡೆದು ಕಲಾ ವಿಭಾಗದಲ್ಲಿ ಜಿಲ್ಲೆಗೆ 3ನೇ ಸ್ಥಾನ ಪಡೆದಿದ್ದಾರೆ. ಇತಿಹಾಸ ವಿಷಯದಲ್ಲಿ 100ಕ್ಕೆ 100 ಅಂಕ ಪಡೆಯುವ ಮೂಲಕ ಭಾಲ್ಕಿ ಹಿರೇಮಠ ಸಂಸ್ಥೆ ಹಾಗೂ ತಾಲ್ಲೂಕಿಗೆ ಹೆಸರು ಮಾಡಿದ್ದಾರೆ ಎಂದು ಪ್ರಾಂಶುಪಾಲ ನವೀಲಕುಮಾರ ಉತ್ಕಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ADVERTISEMENT

ವಿದ್ಯಾರ್ಥಿನಿ ಸುಧಾರಾಣಿ ಅವರಿಗೆ ಇಬ್ಬರು ಸಹೋದರರು. ಅವರಲ್ಲಿ ಒಬ್ಬರು ಪದವಿ, ಇನ್ನೊಬ್ಬರು ಎಂಜಿನಿಯರಿಂಗ್ ಓದುತ್ತಿದ್ದಾರೆ. ಇವರ ತಂದೆ ತಾಯಿ ಕೂಲಿ ಮಾಡಿ ಇವರನ್ನು ಓದಿಸುತ್ತಿದ್ದಾರೆ. ‘ನಮಗೆ ಹೊಲ, ಆಸ್ತಿ ಏನು ಇಲ್ಲ. ನನ್ನ ಮಕ್ಕಳೇ ನನಗೆ ಆಸ್ತಿ’ ಎನ್ನುತ್ತಾರೆ ಸುಧಾರಾಣಿ ಅವರ ತಂದೆ ಸಂಗಪ್ಪ.

‘ನಾನು ಓದಿ ದೊಡ್ಡ ಹುದ್ದೆಯಲ್ಲಿ ಇರಬೇಕು ಎಂಬುದು ನನ್ನ ಪಾಲಕರ ಬಯಕೆ. ಹೀಗಾಗಿ ಪದವಿ ಓದಿ ಕೆಎಎಸ್ ಪರೀಕ್ಷೆ ಪಾಸು ಮಾಡುವ ಗುರಿ ಇದೆ. ಈ ಗುರಿ ತಲುಪಲು ನಾನು ಹಗಲಿರುಳು ಶ್ರಮಿಸುತ್ತೇನೆ’ ಎಂದು ವಿದ್ಯಾರ್ಥಿನಿ ಸುಧಾರಾಣಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.