
ಭಾಲ್ಕಿ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಮರಕ್ಕೆ ಕಟ್ಟಿ ಸಜೀವ ದಹನ ಮಾಡಿರುವ ಘಟನೆ ಖಂಡಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಭಾಲ್ಕಿ ಪ್ರಖಂಡದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಂಬೇಡ್ಕರ್ ವೃತ್ತದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರಮುಖರು ಮಾತನಾಡಿ, ‘ಬಾಂಗ್ಲಾದೇಶ ಸರ್ಕಾರವು ಹಿಂದೂಗಳ ರಕ್ಷಣೆಗಾಗಿ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಅಂತರರಾಷ್ಟ್ರೀಯ ಸಮುದಾಯ ಮಧ್ಯಸ್ಥಿಕೆ ವಹಿಸಬೇಕು’ ಎಂದು ಆಗ್ರಹಿಸಿದರು.
ಪ್ರಮುಖರಾದ ಜೈಕಿಶನ್ ಬಿಯಾನಿ, ಅನುಸೂಜಾ ರೆಡ್ಡಿ, ದುರ್ಗಾ ವಾಹಿನಿ, ಶ್ರೀನಾಥ ಹೇಡಾ, ಸಚಿನ್ ಜಾಧವ, ಶೈಲೇಶ ಮಾಲಪಾನಿ, ರವಿಕಾಂತ ಕುಂಬಾರ, ದೇವರಾಜ ಸಿಂಗ್ ಠಾಕೂರ, ರಾಹುಲ್ ವಾಡೇಕರ, ಮೀನಾಕ್ಷಿ ಬಿರಾದಾರ, ಸುನೀತಾ ಮಿಣಕೆರೆ, ಶಿವು ಲೋಖಂಡೆ, ಡಿ.ಕೆ. ಸಿದ್ರಾಮ, ವೀರಣ್ಣ ಕಾರಬಾರಿ, ದಯಾನಂದ ಪವಾರ, ಸತೀಶ ಜಿ. ಮುದಾಲೆ, ಶಿವಾಜಿರಾವ ಮಾನೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.