ADVERTISEMENT

ರಾಷ್ಟ್ರೀಯ ಬಸವ ದಳ: ತಾಲ್ಲೂಕು ಘಟಕದ ಅಧ್ಯಕ್ಷರಾಗಿ ದತ್ತು ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 8:15 IST
Last Updated 28 ಡಿಸೆಂಬರ್ 2025, 8:15 IST
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಬಸವ ದಳದ ಹುಲಸೂರ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ದತ್ತು ರಾಘೋ ಅವರನ್ನು ಗಂಗಾಮಾತೆ ಅಭಿನಂದಿಸಿದರು
ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಾಷ್ಟ್ರೀಯ ಬಸವ ದಳದ ಹುಲಸೂರ ತಾಲ್ಲೂಕು ಅಧ್ಯಕ್ಷರಾಗಿ ಆಯ್ಕೆಯಾದ ದತ್ತು ರಾಘೋ ಅವರನ್ನು ಗಂಗಾಮಾತೆ ಅಭಿನಂದಿಸಿದರು   

ಹುಲಸೂರ: ಬಸವ ತತ್ವ, ಸಮಾಜಸೇವೆ ಹಾಗೂ ಸಂಘಟನಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗಡಿಗೌಡಗಾಂವ ಗ್ರಾಮದ ದತ್ತು ರಾಘೋ ಅವರನ್ನು ಹುಲಸೂರ ತಾಲ್ಲೂಕು ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ನಡೆದ ಶರಣ ಮೇಳದ ಆಹ್ವಾನ ಸಮಾರಂಭದಲ್ಲಿ ಗಂಗಾಮಾತೆ, ಬಸವ ಮಹಾಮನೆಯ ಪೀಠಾಧಿಪತಿ ಸಿದ್ಧರಾಮೇಶ್ವರ ಸ್ವಾಮೀಜಿ ಹಾಗೂ ಲಾವಣ್ಯ ಮಾತಾಜಿ  ಸಾನ್ನಿಧ್ಯದಲ್ಲಿ ನೇಮಕ ಪ್ರಕ್ರಿಯೆ ಜರುಗಿತು.

ಕಾರ್ಯಕ್ರಮದಲ್ಲಿ ಬಸವಕಲ್ಯಾಣ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ರವಿ ಕೊಳಕೂರ, ಹುಲಸೂರ ಬಸವಕೇಂದ್ರ ಅಧ್ಯಕ್ಷ ಆಕಾಶ ಖಂಡಾಳೆ, ಅನೀಲಕುಮಾರ ತಾಂಬೂಳೆ, ಸತೀಶ ಹೀರೆಮಠ, ರಾಜಶೇಖರ ಬಿರಾದಾರ, ಕರೂಣೇಶ ಸೇರಿದಂತೆ ಹಲವಾರು ಪದಾಧಿಕಾರಿಗಳು, ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.