ಕಡತ
(ಸಾಂದರ್ಭಿಕ ಚಿತ್ರ)
ಬಸವಕಲ್ಯಾಣ (ಬೀದರ್ ಜಿಲ್ಲೆ): `ದಸರಾ ದರ್ಬಾರ ಅಲ್ಲ. ದಸರಾ ಧರ್ಮ ಸಮ್ಮೇಳನ ಎಂಬ ಹೆಸರಲ್ಲಿ ಕಾರ್ಯಕ್ರಮ ನಡೆಯಲಿದ್ದು ವೇದಿಕೆಯಲ್ಲಿ ಬಸವಣ್ಣನವರ ಭಾವಚಿತ್ರ ಇರಲಿದೆ' ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಸಮಿತಿ ವಕ್ತಾರ ಸುರೇಶ ವೀರಯ್ಯ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಅವರು ಗುರುವಾರ ಪ್ರಕಟಣೆ ಹೊರಡಿಸಿದ್ದಾರೆ. `ಕೆಲವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದು ಸರಿಯಲ್ಲ. ರಂಭಾಪುರಿ ಪೀಠಾಧ್ಯಕ್ಷರ ನೇತೃತ್ವದಲ್ಲಿ ನಾಡಿನಾದ್ಯಂತ ಇದುವರೆಗೆ 34 ಧರ್ಮ ಸಮ್ಮೇಳನಗಳು ನಡೆದಿದ್ದು ಎಲ್ಲಿಯೂ ಯಾವುದೇ ವಿವಾದ ಅಗಿಲ್ಲ' ಎಂದಿದ್ದಾರೆ.
`ಸಾಮರಸ್ಯದ ಸದ್ಭಾವನೆಯ ವಿಚಾರಗಳು ಇಲ್ಲಿ ಪ್ರಸ್ತಾಪಿತವಾಗುತ್ತವೆ. ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ ಮತ್ತು ರಾಷ್ಟ್ರಾಭಿಮಾನ ಬೆಳೆಸುವುದರ ಮೂಲಕ ಜನ ಸಮುದಾಯದಲ್ಲಿ ಜೀವನೋತ್ಸಾಹ ತುಂಬುವುದೇ ಇದರ ಮೂಲ ಗುರಿಯಾಗಿದೆ. ಇದು ಜಾತಿ ಮತ ಪಂಥಗಳನ್ನು ಮೀರಿ ಸರ್ವ ಸಮಾಜದವರನ್ನು ಹಾಗೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಸೇರಿದಂತೆ ಸರ್ವರನ್ನು ಒಳಗೊಂಡು ನಡೆಸುವ ಕಾರ್ಯಕ್ರಮವಾಗಿದೆ. ವಿವಿಧ ಕ್ಷೇತ್ರದ ಸಾಧಕರಿಗೆ ಶಿವಾಚಾರ್ಯ ರತ್ನ ಹಾಗೂ ಇತರೆ ಪ್ರಶಸ್ತಿ ನೀಡಲಾಗುತ್ತದೆ' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.