ADVERTISEMENT

ಕೈಗಾರಿಕಾ ಮಹಾ ಮಂಡಳಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 14:24 IST
Last Updated 11 ಜನವರಿ 2021, 14:24 IST
ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ ನಿಟ್ಟೂರೆ ಅವರನ್ನು ಬೀದರ್‌ನ ರಾಂಪುರೆ ಕಾಲೊನಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು
ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾದ ಬಸವರಾಜ ನಿಟ್ಟೂರೆ ಅವರನ್ನು ಬೀದರ್‌ನ ರಾಂಪುರೆ ಕಾಲೊನಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು   

ಬೀದರ್: ಇಲ್ಲಿಯ ಮುಖಂಡ ಬಸವರಾಜ ನಿಟ್ಟೂರೆ ಅವರು ಮೂರನೇ ಬಾರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನಿಟ್ಟೂರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲಿಂಗಮೂರ್ತಿ ತಿಳಿಸಿದ್ದಾರೆ.

ಸದ್ಯ ಬೀದರ್‌ನ ರಾಂಪುರೆ ಕಾಲೊನಿಯಲ್ಲಿ ವಾಸವಾಗಿರುವ ಮೂಲತಃ ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದವರಾದ ನಿಟ್ಟೂರೆ ಅವರು ಈ ಹಿಂದೆ ಎರಡು ಬಾರಿ ಮಹಾ ಮಂಡಳದ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಮೂರನೇ ಅವಧಿಗೆ ಅವಕಾಶ ದೊರಕಿದೆ.

ADVERTISEMENT

ಸನ್ಮಾನ: ಮಹಾಮಂಡಳಕ್ಕೆ ಆಯ್ಕೆಯಾದ ಬಸವರಾಜ ನಿಟ್ಟೂರೆ ಅವರನ್ನು ನಗರದ ರಾಂಪುರೆ ಕಾಲೊನಿಯಲ್ಲಿ ಗುರುದತ್ತ ನಗರ ಅಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.

ಗುರುದತ್ತ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಶಾಂತವೀರ ಚಪಾತಿ, ಕಂಟೆಪ್ಪ ಎನಕೆಮೊರೆ, ಎಚ್. ಚಂದ್ರಕಾಂತ, ಮಲ್ಲಿಕಾರ್ಜುನ ಪಾಟೀಲ, ಬಳಿರಾಮ ಕುರನಾಳೆ, ಮಲ್ಲಿಕಾರ್ಜುನ ನೀಲಾ, ಗಂಗಾಧರ ಪಂಚಾಳ, ಉಮಾಕಾಂತ ಬಲಜೀತ್, ಗುಂಡಪ್ಪ ಪಾಟೀಲ, ಸಂಗ್ರಾಮ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.