ADVERTISEMENT

ಮೌಲ್ಯಗಳ ಅಮೂಲ್ಯ ಗ್ರಂಥ ಭಗವದ್ಗೀತೆ

ಜನಸೇವಾ ಶಾಲೆಯಲ್ಲಿ ಗೀತಾ ಜಯಂತಿ: ಮಿಲಿಂದ್ ಆಚಾರ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 11:09 IST
Last Updated 3 ಡಿಸೆಂಬರ್ 2022, 11:09 IST
ಬೀದರ್‌ನ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗೀತಾ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾಧ್ಯಾಪಕ ಮಿಲಿಂದ್ ಆಚಾರ್ಯ ಮಾತನಾಡಿದರು
ಬೀದರ್‌ನ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಗೀತಾ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಸಂಸ್ಕೃತ ಪ್ರಾಧ್ಯಾಪಕ ಮಿಲಿಂದ್ ಆಚಾರ್ಯ ಮಾತನಾಡಿದರು   

ಬೀದರ್‌:ಚಮಾನವೀಯ ಮೌಲ್ಯಗಳ ಅಮೂಲ್ಯ ಗ್ರಂಥವೇ ಭಗವದ್ಗೀತೆ ಎಂದು ಸಂಸ್ಕೃತ ಪ್ರಾಧ್ಯಾಪಕ ಮಿಲಿಂದ್ ಆಚಾರ್ಯ ನುಡಿದರು.

ಇಲ್ಲಿಯ ಪ್ರತಾಪನಗರದ ಜನಸೇವಾ ಶಿಶು ಮಂದಿರ, ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನ ಸಮಾರೋಪ ಹಾಗೂ ಗೀತಾ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗವದ್ಗೀತೆ ಗ್ರಂಥವಷ್ಟೇ ಅಲ್ಲ; ಜೀವನದ ಮಾರ್ಗದರ್ಶಕವೂ ಆಗಿದೆ. ಇಡೀ ಮನುಕುಲಕ್ಕೆ ಸಂಬಂಧಿಸಿದ ಗ್ರಂಥ ಇದಾಗಿದೆ ಎಂದು ಹೇಳಿದರು.

ವಿಶ್ವ ಬಂಧುತ್ವ ಸಂದೇಶ ಭಗವದ್ಗೀತೆಯಲ್ಲಿ ಇದೆ. ಅದು ಸತ್ಯ, ನ್ಯಾಯ, ನೀತಿ, ಧರ್ಮವನ್ನು ಸಾರಿದೆ. ಹೀಗಾಗಿ ಭಗವದ್ಗೀತೆ ಅಧ್ಯಯನ ಮಾಡಿದವರು ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದರು.

ADVERTISEMENT

ಸಾಮಾಜಿಕ ಕಾರ್ಯಕರ್ತ ವರದರಾಜ ಬಾವಗೆ ಮಾತನಾಡಿ, ಪ್ರೇರಣಾತ್ಮಕ ಗ್ರಂಥವಾಗಿರುವ ಭಗವದ್ಗೀತೆ ಪಠ್ಯದ ಭಾಗವಾಗಬೇಕು ಎಂದು ಹೇಳಿದರು.

ಬುದ್ಧಿಶಕ್ತಿ, ಆಧ್ಯಾತ್ಮ, ಯೋಗ, ಆಯುರ್ವೇದ ಹೀಗೆ ಎಲ್ಲದರಲ್ಲೂ ಭಾರತ ಶ್ರೇಷ್ಠವಾಗಿದೆ ಎಂದು ತಿಳಿಸಿದರು.
ಜನಸೇವಾ ಶಾಲೆಯ ಆಡಳಿತಾಧಿಕಾರಿ ಸೌಭಾಗ್ಯವತಿ ಮಾತನಾಡಿ, ಭಗವದ್ಗೀತೆಯಲ್ಲಿ 18 ಅಧ್ಯಾಯಗಳು ಇವೆ. ನಡೆ, ನುಡಿ ಹೇಗಿರಬೇಕು. ಮಕ್ಕಳಿಗೆ ಯಾವ ರೀತಿ ಸಂಸ್ಕಾರ ಕೊಡಬೇಕು ಎನ್ನುವುದನ್ನು ಅದರಲ್ಲಿ ವಿವರಿಸಲಾಗಿದೆ ಎಂದರು.
ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವದ್ಗೀತೆ ಐದನೇ ಅಧ್ಯಾಯದ ಪಠಣ ಮಾಡಲಾಯಿತು. ಶಿಕ್ಷಕಿ ಜ್ಯೋತಿ ನಿರೂಪಿಸಿದರು. ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.