ADVERTISEMENT

‘ಸಾಹಿತ್ಯದ ಓದಿನಿಂದ ಚಿಂತನಾ ಶಕ್ತಿ ಹೆಚ್ಚಳ’

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:15 IST
Last Updated 30 ಜುಲೈ 2023, 15:15 IST
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ವಿ.ಗುರುಪ್ರಸಾದ ವಿರಚಿತ ‘ಕೈಗೆ ಬಂದ ತುತ್ತು’ ಆತ್ಮಕಥನದ ಮೂರನೇ ಆವೃತ್ತಿಯನ್ನು ಬಸವಕಲ್ಯಾಣ ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು

ಭಾಲ್ಕಿ: ‘ಸಾಹಿತ್ಯದ ನಿರಂತರ ಓದು ಚಿಂತನಾ ಶಕ್ತಿಯನ್ನು ಹೆಚ್ಚಿಸಿ ಸುಜ್ಞಾನಿಗಳನ್ನಾಗಿಸುತ್ತದೆ’ ಎಂದು ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಶ್ರೀಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ನಿವೃತ್ತ ಐಪಿಎಸ್‌ ಡಿ.ವಿ.ಗುರುಪ್ರಸಾದ ವಿರಚಿತ ‘ಕೈಗೆ ಬಂದ ತುತ್ತು’ ಆತ್ಮಕಥನದ ಮೂರನೇ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಿವೃತ್ತ ಐಪಿಎಸ್‌ ಅಧಿಕಾರಿ, ಆತ್ಮಕಥನದ ಲೇಖಕ ಡಿ.ವಿ.ಗುರುಪ್ರಸಾದ ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಕಷ್ಟಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಧೈರ್ಯಶಾಲಿಗಳಾಗಿ ಮುನ್ನುಗ್ಗಬೇಕು. ಅಂದಾಗ ಮಾತ್ರ ಮಹೋನ್ನತ ಸಾಧನೆ, ಯಶಸ್ವಿ ಜೀವನ ನಡೆಸಲು ಸಾಧ್ಯ’ ಎಂದು ಮಾರ್ಮಿಕ ಉದಾಹರಣೆ ಸಹಿತ ತಿಳಿಸಿದರು.

ADVERTISEMENT

ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಮಧುಕರ ಗಾಂವ್ಕರ್‌ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.