ಪ್ರಜಾವಾಣಿ ವಾರ್ತೆ
ಭಾಲ್ಕಿ: ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು ಬಹಳ ಮುಖ್ಯ. ಅಂಥ ಶಿಸ್ತು ವಿದ್ಯಾರ್ಥಿಗಳಲ್ಲಿ ಎನ್‍ಸಿಸಿ ಘಟಕ ತಂದು ಕೊಡುತ್ತದೆ ಎಂದು ನಿವೃತ್ತ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಹೇಳಿದರು.
ಪಟ್ಟಣದ ಶಿವಾಜಿ ಕಾಲೇಜಿನಲ್ಲಿ ಎನ್‍ಸಿಸಿ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ಇವೆಂಟ್ಸ್ ಹಾಗೂ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಎನ್‌ಸಿಸಿ ಘಟಕದಲ್ಲಿ ಪ್ರವೇಶ ಪಡೆಯುವುದರಿಂದ ವಿದ್ಯಾರ್ಥಿಗಳ ದೈಹಿಕ ಕ್ಷಮತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಎನ್‍ಸಿಸಿ ಘಟಕದ ಮೇಜರ್ ನೀಲಕಂಠರಾವ್ ಕಾಳೆ ಮಾತನಾಡಿದರು. ಮೀನಾಕ್ಷಿ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.