ADVERTISEMENT

ಆಣದೂರುವಾಡಿಯಲ್ಲಿ ಜೈ ಮಂತ್ರಾಲ ಭವಾನಿ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 15:29 IST
Last Updated 3 ಜನವರಿ 2022, 15:29 IST
ಬೀದರ್ ತಾಲ್ಲೂಕಿನ ಆಣದೂರುವಾಡಿ ಗ್ರಾಮದಲ್ಲಿ ನಡೆದ ಜೈ ಮಂತ್ರಾಲ ಭವಾನಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರನ್ನು ಸನ್ಮಾನಿಸಲಾಯಿತು
ಬೀದರ್ ತಾಲ್ಲೂಕಿನ ಆಣದೂರುವಾಡಿ ಗ್ರಾಮದಲ್ಲಿ ನಡೆದ ಜೈ ಮಂತ್ರಾಲ ಭವಾನಿ ಜಾತ್ರಾ ಮಹೋತ್ಸವದಲ್ಲಿ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರನ್ನು ಸನ್ಮಾನಿಸಲಾಯಿತು   

ಜನವಾಡ: ಬೀದರ್ ತಾಲ್ಲೂಕಿನ ಆಣದೂರುವಾಡಿ ಗ್ರಾಮದಲ್ಲಿ ಜೈ ಮಂತ್ರಾಲ ಭವಾನಿ ಜಾತ್ರಾ ಮಹೋತ್ಸವ ಶ್ರದ್ಧೆ, ಭಕ್ತಿಯಿಂದ ಜರುಗಿತು.

ಸಹಸ್ರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು, ಕೋವಿಡ್‍ನಿಂದ ಜನ ಎರಡು ವರ್ಷ ತೊಂದರೆ ಅನುಭವಿಸಿದ್ದಾರೆ. ಭವಾನಿ ಮಾತೆ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಾಂತಕುಮಾರ ರಾಠೋಡ್, ಜಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಪವಾರ್, ಸಮಾಜದ ಮುಖಂಡ ಗೋಪಾಲ್‍ಸಿಂಗ್ ಠಾಕೂರ್, ದೇವಸ್ಥಾನದ ಅಧ್ಯಕ್ಷ ವಾಲ್ಮೀಕ ರಾಠೋಡ್, ಕಾರ್ಯದರ್ಶಿ ಭಗುಸಿಂಗ್ ಜಾಧವ್, ಪುಷ್ಪಕಕುಮಾರ ಜಾಧವ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.