
ಪ್ರಜಾವಾಣಿ ವಾರ್ತೆ
ಭಾಲ್ಕಿ : ಮಾಜಿ ಸಚಿವ, ಲೋಕ ನಾಯಕ ಭೀಮಣ್ಣ ಖಂಡ್ರೆ ಅವರ ಹೋರಾಟದಿಂದ ಬೀದರ್ ಕರ್ನಾಟಕದಲ್ಲಿ ಉಳಿದಿದೆ ಎಂದು ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ಹೇಳಿದರು.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾ ಘಟಕದ ವತಿಯಿಂದ ಭಾಲ್ಕಿ ಪಟ್ಟಣದ ಕನ್ನಡ ಧ್ವಜ ಸ್ತಂಭದ ಬಳಿ ಶನಿವಾರ ನಡೆದ ಭೀಮಣ್ಣ ಖಂಡ್ರೆ ಅವರ ನುಡಿ ನಮನ ಸಭೆಯಲ್ಲಿ ಅವರು ಮಾತನಾಡಿದರು.
ಸೇನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ರಮೇಶ ಚಿದ್ರಿ, ಪ್ರಮುಖರಾದ ಗಿರೀಶ್ ಬಿರಾದಾರ, ಸುದೀಪ್ ತೂಗಾವೆ, ಬಸವರಾಜ ಕಾರಬಾರಿ, ಕಾಶೀನಾಥ ಚಳಕಾಪುರೆ, ಭದ್ರಯ್ಯ ಸ್ವಾಮಿ, ಅಮರೇಶ್ವರ ಮೋಹಿತೆ, ರವೀಂದ್ರ ಬಳತೆ, ಸುನೀಲ್ ರಾಗಾ, ರಾಜೇಂದ್ರ ಗೌರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.