
ಟ್ರಾಲಿ, ಕೃಷಿ ಉಪಕರಣಗಳನ್ನು ಕಳವು ಮಾಡಿದ್ದ ಮೂವರ ಬಂಧನ
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಟ್ರಾಲಿ ಹಾಗೂ ಕೃಷಿ ಉಪಕರಣಗಳ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ₹17.15 ಲಕ್ಷದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಡೊಣಗಾಂವ (ಎಂ) ಗ್ರಾಮದ ವಿಶ್ವನಾಥ ರೂಪನಾರ್ (28), ಮನೋಜ ರಾಜೇಂದ್ರ ಗುಣಗೆ (38) ಹಾಗೂ ಪಾಂಡುರಂಗ ಮಾಧವರಾವ ಸಂಗನಾಳೆ (20) ಬಂಧಿತರು. ಆರೋಪಿಗಳು ಬೀದರ್ ಜಿಲ್ಲೆಯ ವಿವಿಧೆಡೆ ಟ್ರಾಲಿ ಮತ್ತು ಕೃಷಿ ಉಪಕರಣಗಳನ್ನು ಕಳವು ಮಾಡಿರುವುದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಒಂದು ನೀಲಿ ಬಣ್ಣದ ಟ್ರಾಲಿ, ಹಸಿರು–ಹಳದಿ ಹಾಗೂ ನೇರಳೆ–ಹಳದಿ ಮಿಶ್ರಿತ ಬಣ್ಣದ ಟ್ರಾಲಿಗಳು, ಎರಡು ಟ್ರ್ಯಾಕ್ಟರ್ ಚೆಸ್ಸಿಗಳು, ಎರಡು ಬೀಜ ಬಿತ್ತುವ ಕಬ್ಬಿಣದ ಕೂರಿಗೆಗಳು, ಕೃತ್ಯಕ್ಕೆ ಬಳಸಿದ ಜಾನ್‌ಡೀರ್ ಕಂಪನಿಯ ಟ್ರ್ಯಾಕ್ಟರ್ ಎಂಜಿನ್ ಹಾಗೂ ಒಂದು ಪಲ್ಸರ್ ಬೈಕ್ ಸೇರಿ ಒಟ್ಟು ₹17.15 ಲಕ್ಷದ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಭಾಲ್ಕಿ ಗ್ರಾಮೀಣ ಸಿಪಿಐ ಹನುಮರೆಡ್ಡಿ ನೇತೃತ್ವದಲ್ಲಿ ಮೇಹಕರ ಪೊಲೀಸ್ ಠಾಣೆಯ ಪಿಎಸ್‌ಐ ಸುದರ್ಶನರೆಡ್ಡಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.