ADVERTISEMENT

ಬೀದರ್: ಅಕ್ರಮ ಮದ್ಯ, ಕಳ್ಳಬಟ್ಟಿ ವಶ

​ಪ್ರಜಾವಾಣಿ ವಾರ್ತೆ
Published 1 ಮೇ 2020, 15:38 IST
Last Updated 1 ಮೇ 2020, 15:38 IST
ಬೀದರ್ ತಾಲ್ಲೂಕಿನ ಸೋಲಪುರ ರಸ್ತೆಯಲ್ಲಿ ವಶಪಡಿಸಿಕೊಳ್ಳಲಾದ ಕಾರು ಹಾಗೂ ಬೀಯರ್ ಬಾಟಲಿಗಳು
ಬೀದರ್ ತಾಲ್ಲೂಕಿನ ಸೋಲಪುರ ರಸ್ತೆಯಲ್ಲಿ ವಶಪಡಿಸಿಕೊಳ್ಳಲಾದ ಕಾರು ಹಾಗೂ ಬೀಯರ್ ಬಾಟಲಿಗಳು   

ಬೀದರ್: ಜಿಲ್ಲೆಯ ಎರಡು ಕಡೆಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಹಾಗೂ ಕಳ್ಳಬಟ್ಟಿಯನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೀದರ್ ತಾಲ್ಲೂಕಿನ ಸೋಲಪುರ ಗ್ರಾಮದ ರಸ್ತೆಯಲ್ಲಿ ಕಾರು ತಪಾಸಣೆ ನಡೆಸಿ 15.6 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ.

ಬಸವಕಲ್ಯಾಣ ತಾಲ್ಲೂಕಿನ ಉಜಳಂಬದ ಹತ್ತಿರ ಎರಡು ದ್ವಿಚಕ್ರ ವಾಹನದ ಮೇಲೆ ಸಾಗಿಸುತ್ತಿದ್ದ 60 ಲೀಟರ್ ಕಳ್ಳಬಟ್ಟಿ ಹಾಗೂ 7.560 ಲೀಟರ್ ಮಹಾರಾಷ್ಟ್ರ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಎರಡೂ ಕಡೆ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.