ADVERTISEMENT

ಔರಾದ್; 68 ಜನರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 5:53 IST
Last Updated 14 ಡಿಸೆಂಬರ್ 2025, 5:53 IST
ಔರಾದ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರನ್ನು ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ ಉದ್ಘಾಟಿಸಿದರು
ಔರಾದ್ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದಲ್ಲಿ ನಡೆದ ರಕ್ತದಾನ ಶಿಬಿರನ್ನು ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ ಉದ್ಘಾಟಿಸಿದರು   

ಔರಾದ್: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರ ರಾಷ್ಟ್ರೀಯ ಕಿಸಾನ್ ದಿವಸ್ ಅಂಗವಾಗಿ ಶನಿವಾರ ಆಯೋಜಿಸಿದ ಶಿಬಿರದಲ್ಲಿ ಮಹಿಳೆಯರು ಸೇರಿದಂತೆ 68 ಜನ ರಕ್ತದಾನ ಮಾಡಿದ್ದಾರೆ.

ಸೇವಾ ಕೇಂದ್ರದ ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ, ಶಾಂತಾ ಬಹೆನಜೀ ಹಾಗೂ ಅಗ್ನಿಶಾಮಕ ಠಾಣೆಯ ನಾಲ್ವರು ಸಿಬ್ಬಂದಿ ಸೇರಿದಂತೆ 68 ಜನ ರಕ್ತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ಈಶ್ವರೀಯ ವಿಶ್ವವಿದ್ಯಾಲಯ ಸೇವಾ ಕೇಂದ್ರದ ಗಂಗಾರೆಡ್ಡಿ, ಶ್ರೀನಿವಾಸರೆಡ್ಡಿ, ದಿಲೀಪ ಔರಾದಕರ್‌, ಶಿವಕುಮಾರ ಗಿರಣೆ, ಸಂಗಪ್ಪ ಘಾಟೆ, ಅಮರರೆಡ್ಡಿ, ಮಹಾದೇವ ಅವರು ರಕ್ತದಾನ ಮಾಡಿದ್ದಾರೆ. 

ADVERTISEMENT

ಈ ದೇಶ ಕಾಪಾಡುವುದು ಸೈನಿಕ. ಹಾಗೆಯೇ ಈ ದೇಶಕ್ಕೆ ಅನ್ನ ಕೊಡುವವರು ರೈತರು. ಹೀಗಾಗಿ ನಾವು ಪ್ರತಿ ವರ್ಷ ಕಿಸಾನ್ ದಿವಸ್ ಆಚರಿಸುತ್ತೇವೆ. ಈ ಬಾರಿ ನಮ್ಮ ಸೇವಾ ಕೇಂದ್ರಕ್ಕೆ ಬರುವವರೆಲ್ಲರೂ ಸ್ವಯಂ ಪ್ರೇರಣೆಯಿಂದ ಬಂದು ರಕ್ತದಾನ ಮಾಡಿದ್ದು ಖುಷಿ ಕೊಟ್ಟಿದೆ ಎಂದು ಬಿ.ಕೆ. ರಾಜಯೋಗಿನಿ ಸುಹಾಸಿನಿ ಬಹೆನಜೀ ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರನ್ನು ಗುರುತಿಸಿ ಅವರಿಗೆ ನಮ್ಮ ಆಶ್ರಮದ ವಹಿತಿಯಿಂದ ಸತ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.