ADVERTISEMENT

‘ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರ ಹೆಸರಿಡಿ’: ಬಸವರಾಜ ಮದ್ರಿಕಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 6:06 IST
Last Updated 12 ಜುಲೈ 2025, 6:06 IST
ಬಸವರಾಜ ಮದ್ರಿಕಿ
ಬಸವರಾಜ ಮದ್ರಿಕಿ   

ಬೀದರ್‌: ‘ಬೀದರ್‌ ವಿಮಾನ ನಿಲ್ದಾಣಕ್ಕೆ ಮಹಾತ್ಮ ಬೊಮ್ಮಗೊಂಡೇಶ್ವರರ ಹೆಸರಿಡಬೇಕು’ ಎಂದು ಕೋಮರಾಮ್ ಭೀಮ್ ಗೊಂಡ ಕುರುಬ ಸಂಘದ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಉಸ್ತುವಾರಿ ಬಸವರಾಜ ಮದ್ರಿಕಿ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೊಮ್ಮಗೊಂಡೇಶ್ವರರು ಬೀದರ್‌ ಜನತೆಗೆ ಭೂಮಿಯಿಂದ ನೀರು ತೆಗೆದು, ನೀರುಣಿಸಿದ ಮಹಾನ್‌ ಸಂತ. ಬೀದರ್‌ ಕೋಟೆ ನಿರ್ಮಾಣಕ್ಕೆ ತನ್ನ ತನು, ಮನ, ಧನದಿಂದ ಕೆಲಸ ಮಾಡಿದವರು. ಕುರಿ ಕಾಯುವ ಕಾಯಕ ಮಾಡುತ್ತ ಸೇವೆಗೈದ ಮಹಾನ ಪುರುಷ. ಮಹಾತ್ಮ ಬೊಮ್ಮಗೊಂಡರು ಜನಿಸಿರುವ ಸ್ಥಳ ವಿಮಾನ ನಿಲ್ದಾಣ ಸಮೀಪದ ಚಿದ್ರಿ ಗ್ರಾಮ. ಆದಕಾರಣ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಟ್ಟರೆ ಸೂಕ್ತ ಎಂದು ಅಭಿಪ್ರಾಯ ಪಟ್ಟರು.

ಬೀದರ್‌ ಜಿಲ್ಲೆಯಲ್ಲಿ ಗೊಂಡ ಸಮುದಾಯದ ಮತದಾರರ ಜನಸಂಖ್ಯೆ ಹೆಚ್ಚಿದೆ. ಬೀದರ್‌ ವಿಮಾನ ನಿಲ್ದಾಣಕ್ಕೆ ಬೊಮ್ಮಗೊಂಡೇಶ್ವರರ ಹೆಸರಿಟ್ಟರೆ ಉತ್ತಮ. ಬೊಮ್ಮಗೊಂಡೇಶ್ವರರು ಲಿಂಗೈಕ್ಯರಾದ  ಸಮಾಧಿ ಸ್ಥಳ, ಕೆರೆ ಹಾಗೂ ನಾವದಗೇರಿಯ ಬೆಟ್ಟ ಅಭಿವೃದ್ಧಿಗೊಳಿಸಿ ಅವರ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಯುವ ಪೀಳಿಗೆಗೆ ಮಹಾತ್ಮ ಬೊಮ್ಮಗೊಂಡೇಶ್ವರರ ಇತಿಹಾಸ ಪರಿಚಯಿಸುವ ಅಗತ್ಯ ಇದೆ. ಬೊಮ್ಮಗೊಂಡೇಶ್ವರ ಜೀವನ ಹಾಗೂ ಸಾಧನೆಯನ್ನು ಪಠ್ಯ ಪುಸ್ತದಲ್ಲಿ ಸೇರಿಸಬೇಕು. ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣ (ಖಂಡೋಬಾ ) ಪುಣ್ಯ ಕ್ಷೇತ್ರವು ದಕ್ಷಿಣ ಭಾರತದಲ್ಲಿ ಬಹಳ ಪ್ರಸಿದ್ದಿ ಪಡೆದಿದೆ. ಇದನ್ನು ದಕ್ಷಿಣದ ಕಾಶಿಯಂದೆ ಕರೆಯುತ್ತಾರೆ. ಇಲ್ಲಿಗೆ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವೆಡೆಗಳಿಂದ ಭಕ್ತರು ಬರುತ್ತಾರೆ. ಅಲ್ಲಿ ಯಾತ್ರಿ ನಿವಾಸ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಮುಖಂಡ ಸುರೇಶ ಮಾಳೆಗಾಯಿ ಹಳ್ಳಿಖೇಡ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.