
ಬಸವಕಲ್ಯಾಣ: ತಾಲ್ಲೂಕಿನ ಯರಂಡಗಿ ಹತ್ತಿರ ಶುಕ್ರವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ರಸ್ತೆ ಕೆಳಗೆ ಇಳಿದು ನಿಂತಿದ್ದು, ಅನಾಹುತ ತಪ್ಪಿದೆ.
ಬಸ್ ಬಸವಕಲ್ಯಾಣ ನಗರದಿಂದ ಮುಡಬಿಗೆ ಹೋಗುತ್ತಿತ್ತು. ಬಸ್ ಎದುರಲ್ಲಿ ಬಂದ ಬೇರೆ ವಾಹನಗಳನ್ನು ತಪ್ಪಿಸುವಾಗ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ರಸ್ತೆ ಕೆಳಗೆ ಇಳಿದ ಬಸ್ ಎದುರಲ್ಲಿ ತಗ್ಗು ಮತ್ತು ಮುಳ್ಳುಕಂಟೆಗಳು ಇದ್ದುದರಿಂದ ಅರ್ಧ ವಾಲಿದ ಬಸ್ ನಿಂತಲ್ಲೇ ನಿಂತಿತು. ಆಗ ಗಾಬರಿಗೊಂಡ ಪ್ರಯಾಣಿಕರು ಕೆಳಗೆ ಇಳಿಯಲು ಆರಂಭಿಸಿದರು. ಗದ್ದಲ ಆಗಿದ್ದರಿಂದ ತುರ್ತು ನಿರ್ಗಮನದ ಬಾಗಿಲು ಸಹ ತೆರೆಯಲಾಯಿತು.
ಒಳಗಿದ್ದ 50ಕ್ಕಿಂತ ಹೆಚ್ಚಿನ ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ತಕ್ಷಣ ಕೆಳಗೆ ಇಳಿದರು. ಯಾರಿಗೂ ಏನೂ ಆಗಿಲ್ಲ. ಸಾರಿಗೆ ಸಂಸ್ಥೆಯವರು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.