ADVERTISEMENT

ಸುಳ್ಳು ಜಾತಿ ಪತ್ರ ನೀಡಿದರೆ ದಾಖಲಾತಿ ರದ್ದುಪಡಿಸಿ: ದಸಂಸ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 13:23 IST
Last Updated 15 ಜೂನ್ 2023, 13:23 IST

ಭಾಲ್ಕಿ: ತಾಲ್ಲೂಕಿನಲ್ಲಿ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಮೇಲ್ವರ್ಗದವರೂ ಬೇಡ ಜಂಗಮ, ಮಾಲ ಜಂಗಮ ಭೂವಿ ಎಂದು ನಮೂದಿಸಿ ಪರಿಶಿಷ್ಟ ಜಾತಿ ಸಮುದಾಯದ ಜನರ ಮೀಸಲಾತಿಯನ್ನು ಕಸಿಯುವ ಪ್ರಯತ್ನ ನಡೆಯುತ್ತಿದ್ದು ಇದನ್ನು ತಡೆಹಿಡಿಯಬೇಕು ಎಂದು ತಾಲ್ಲೂಕು ಯುವ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಯುವ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪ್ರದೀಪ ಭಾವಿಕಟ್ಟಿ ನೇತೃತ್ವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ದಾಖಲಾತಿಯಲ್ಲಿ ಮೇಲ್ವರ್ಗದವರು ಸುಳ್ಳು ಜಾತಿ ನಮೂದಿಸಿ ವ್ಯವಸ್ಥಿತವಾಗಿ ಪರಿಶಿಷ್ಟ ಜಾತಿಯ ಹಕ್ಕು ಕಸಿಯುವ ಕೆಲಸ ನಡೆಸುತ್ತಿದ್ದಾರೆ. ಕೂಡಲೇ ಸುಳ್ಳು ಜಾತಿ ದಾಖಲಾತಿ ತಡೆಹಿಡಿದು ರದ್ದುಪಡಿಸುವುದರ ಜತೆಗೆ ಸಂಬಂಧಿತರ ವಿರುದ್ಧ ತನಿಖೆ ನಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ADVERTISEMENT

ಕೀರ್ತಿರತನ ಸೋನಾಳೆ, ಉತ್ತಮಕುಮಾರ ಕುಂದೆ, ಪ್ರವೀಣ ಮೋರೆ, ಸುರೇಶ ಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.