ಬೀದರ್: ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಎಂಟನೇ ಆವೃತ್ತಿಯ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಜಯ ಗಳಿಸಿರುವ ಚಿಟ್ಟಾ ಕ್ರಿಕೆಟ್ ಕ್ಲಬ್ ಪ್ರಶಸ್ತಿ ಜಯಿಸಿದೆ.
ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಚಿಟ್ಟಾ ಕ್ಲಬ್, ಅಮಲಾಪೂರ ಸಿಸಿ ತಂಡದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಟ್ರೋಫಿ ಮುಡಿಗೇರಿಸಿಕೊಂಡಿದೆ. ಸಂಸದ ಸಾಗರ್ ಖಂಡ್ರೆ ಅವರು ವಿಜೇತ ತಂಡಕ್ಕೆ ₹1 ಲಕ್ಷ ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ ₹50 ಸಾವಿರ ನಗದು, ಟ್ರೋಫಿ ನೀಡಿದರು.
ಶೇಕ್ ಅಮೀರ್ ಉತ್ತಮ ಬ್ಯಾಟ್ಸ್‌ಮ್ಯಾನ್, ಪ್ರವೀಣ ಮೇತ್ರೆ ಉತ್ತಮ ಬೌಲರ್, ಕೃಷ್ಣ
ಮತ್ತು ಅಕ್ಷಯ ಉತ್ತಮ ತೀರ್ಪುಗಾರರು, ವಿಶಾಲ ಉತ್ತಮ ವೀಕ್ಷಕ ವಿವರಣೆಗಾರ, ಫೈಜ್ ಅವರಿಗೆ ಉತ್ತಮ ಸ್ಕೋರ್ ವಿವರ, ಕ್ರಿಕೆಟ್ ಅಂಗಳದ ಕ್ಯೂರೇಟ್ ವಿಕ್ಕಿ ಅತಿವಾಳ ಅವರಿಗೆ ಟ್ರೋಫಿ ನೀಡಿ ಸನ್ಮಾನಿಸಲಾಯಿತು.
ಪಂದ್ಯಾವಳಿಯ ಆಯೋಜಕ ಚಂದ್ರಾ ಸಿಂಗ್, ಮುಖಂಡರಾದ ಯೂಸುಫ್ ಅಲಿ
ಜಮಾದಾರ, ನಾರಾಯಣ್ ಭಂಗಿ, ವಿಜಯಕುಮಾರ್ ಬರೂರ, ಶ್ರೀನಿವಾಸ್ ರೆಡ್ಡಿ,
ಮೌಲಾಸಾಬ್, ಮಾರುತಿ ಮಾಸ್ಟರ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.