
ಭಾಲ್ಕಿ ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸೋಮನಾಥ ನುಚ್ಚಾ ಮಾತನಾಡಿದರು
ಭಾಲ್ಕಿ: ಚನ್ನಬಸವ ಪಟ್ಟದ್ದೇವರು, ಭೀಮಣ್ಣ ಖಂಡ್ರೆ ಒಂದೇ ನಾಣ್ಯದ ಎರಡು ಮುಖಗಳಾಗಿದ್ದರು ಎಂದು ಹಿರಿಯ ಸಾಹಿತಿ ಸೋಮನಾಥ ನುಚ್ಚಾ ಹೇಳಿದರು.
ಪಟ್ಟಣದ ಸದ್ಗುರು ವಿದ್ಯಾಲಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮಂಗಳವಾರ ನಡೆದ ಹಮ್ಮಿಕೊಂಡಿದ್ದ ಭೀಮಣ್ಣ ಖಂಡ್ರೆ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚನ್ನಬಸವ ಪಟ್ಟದ್ದೇವರು ಇಚ್ಛಾಶಕ್ತಿ ಯಾದರೆ, ಭೀಮಣ್ಣ ಖಂಡ್ರೆ ಕ್ರಿಯಾ ಶಕ್ತಿಯಾಗಿದ್ದರು. ಭೀಮಣ್ಣ ಖಂಡ್ರೆಯವರ ಸಾಧನೆ ಮರೆಯಲಾಗದು. ಅವರು ಹೋರಾಟ ಮಾಡದಿದ್ದರೆ ನಮ್ಮ ಭಾಗ ಕರ್ನಾಟಕದಲ್ಲಿ ಇರುತ್ತಿರಲಿಲ್ಲ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ ಅವರಾಗಿದ್ದರು’ ಎಂದು ಹೇಳಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ ಮಾತನಾಡಿ, ‘ಭೀಮಣ್ಣ ಖಂಡ್ರೆ ಅವರದ್ದು ನಿಸ್ವಾರ್ಥ ಸೇವೆ. ಅನ್ಯಾಯದ ವಿರುದ್ಧ ಹೋರಾಡಿ ಎಲ್ಲರಿಗೂ ನ್ಯಾಯ ಒದಗಿಸಿಕೊಡುವ ವ್ಯಕ್ತಿತ್ವ ಅವರದ್ದಾಗಿತ್ತು’ ಎಂದರು.
ಹಿರಿಯ ಪತ್ರಕರ್ತ ವಿಜಯಕುಮಾರ ಪರ್ಮಾ, ಕಸಾಪ ನಗರ ಘಟಕದ ಅಧ್ಯಕ್ಷ ಸಂತೋಷ ಬಿಜಿ ಪಾಟೀಲ ಮಾತನಾಡಿದರು. ಸದ್ಗುರು ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಕ್ಷಯಕುಮಾರ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ, ಕಸಾಪ ಉಪಾಧ್ಯಕ್ಷ ಕಾಶಿನಾಥ ಲದ್ದೆ, ಅಶೋಕ ಬಾವುಗೆ, ಕಸಾಪ ರಾಜ್ಯ ಪರಿಷತ್ ಸದಸ್ಯೆ ಮಲ್ಲಮ್ಮ ಆರ್. ಪಾಟೀಲ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಂಭುಲಿಂಗ ಕಾಮಣ್ಣ, ಉಷಾ ನಿಟ್ಟೂರಕರ್, ಸುಸ್ಮಿತಾ ಸಹಾನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.