
ಪ್ರಜಾವಾಣಿ ವಾರ್ತೆ
ಭಾಲ್ಕಿ (ಬೀದರ್ ಜಿಲ್ಲೆ): ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ವಸತಿ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ವೇದಾಂತ ಹಣಮಂತರಾವ್ ಲಕಡೆ ನೀಟ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 165ನೇ ರ‍್ಯಾಂಕ್ ಪಡೆದಿದ್ದಾರೆ.
‘ವೇದಾಂತ 720ಕ್ಕೆ 629 (99.98 ಪರ್ಸೆಂಟೈಲ್) ಅಂಕ ಪಡೆದು ಗಡಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.
ತಂದೆ ಹಣಮಂತರಾವ್, ತಾಯಿ ಸ್ಮಿತಾ ಉಪನ್ಯಾಸಕರು. ಚನ್ನಬಸವೇಶ್ವರ ಗುರುಕುಲ ಪ್ರತಿವರ್ಷ ನಡೆಸುವ ಗೋಲ್ಡನ್ ಸ್ಕಾಲರ್ ಶಿಪ್ ಯೋಜನೆಯಡಿ ಎರಡು ವರ್ಷ ಉಚಿತ ಊಟ, ವಸತಿ, ಪಿಯು ಶಿಕ್ಷಣ, ಕೋಚಿಂಗ್ ಪಡೆದು ಈ ಸಾಧನೆ ಮಾಡಿದ್ದಾರೆ.
ವೇದಾಂತ ಅವರು ಮುಂದೆ ದೆಹಲಿ ಏಮ್ಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಆಸೆ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.