ADVERTISEMENT

ಹುಮನಾಬಾದ್ | ‘ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:28 IST
Last Updated 16 ಡಿಸೆಂಬರ್ 2025, 5:28 IST
ಹುಮನಾಬಾದ್ ತಾಲ್ಲೂಕಿನ ಗಡವಂತಿ ವ್ಯಾಪ್ತಿಯ ಹೊಲವೊಂದರ ಬಳಿ ರಾಸಾಯನಿಕ ತ್ಯಾಜ್ಯ ಹರಿಬಿಟ್ಟಿರುವುದನ್ನು ತಹಶೀಲ್ದಾರ್ ಪರಿಶೀಲಿಸಿದರು
ಹುಮನಾಬಾದ್ ತಾಲ್ಲೂಕಿನ ಗಡವಂತಿ ವ್ಯಾಪ್ತಿಯ ಹೊಲವೊಂದರ ಬಳಿ ರಾಸಾಯನಿಕ ತ್ಯಾಜ್ಯ ಹರಿಬಿಟ್ಟಿರುವುದನ್ನು ತಹಶೀಲ್ದಾರ್ ಪರಿಶೀಲಿಸಿದರು   

ಹುಮನಾಬಾದ್: ತಾಲ್ಲೂಕಿನ ಗಡವಂತಿ ಗ್ರಾಮದ ರೈತ ವೀರಪ್ಪ ಎಂಬುವವರ ಹೊಲದ ಪಕ್ಕದಲ್ಲಿ ಅಪರಿಚಿತರು ರಾಸಾಯನಿಕ ತ್ಯಾಜ್ಯ ಹರಿಬಿಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಅಂಜುಂ ತಬಸುಮ್ ಅವರು ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು,‘ಹೊಲದ ಪಕ್ಕದಲ್ಲಿ ಯಾರೋ ರಾಸಾಯನಿಕ ತ್ಯಾಜ್ಯ ಬಿಟ್ಟಿದ್ದಾರೆ. ಇದರಿಂದಾಗಿ ಸುತ್ತಮುತ್ತಲಿನ ಗಿಡ–ಗಂಟಿಗಳು ಸುಟ್ಟು ಹೋಗಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮೃತ್ಯುಂಜಯ, ಮಾಣಿಕ್ ನಗರ ಗ್ರಾ.ಪಂ ಪಿಡಿಒ ರಾಜಶೇಖರ ಬುಳ್ಳಾ, ಓಂಕಾರ ತುಂಬಾ, ಲಕ್ಷ್ಮಣ, ಪಿಎಸ್ಐ ಸುರೇಶ ಚೌಹಾಣ್, ಸಿಬ್ಬಂದಿ ಮಂಜುನಾಥ ರೆಡ್ಡಿ ಸೇರಿದಂತೆ ಇತರರು ಹಾಜರಿದ್ದರು.‌

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.