ADVERTISEMENT

ಬೀದರ್‌: ಬಾಲಕಿಯೊಂದಿಗೆ ವಿವಾಹ; ವರ, ಪೋಷಕರು ಸೇರಿ ಆರು ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 8:12 IST
Last Updated 6 ಫೆಬ್ರುವರಿ 2026, 8:12 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಬೀದರ್‌: ಬಾಲಕಿಯೊಂದಿಗೆ ಮದುವೆಯಾದ ವರ, ಆತನ ಪೋಷಕರು ಸೇರಿದಂತೆ ಆರು ಜನರ ವಿರುದ್ಧ ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಲ್ಲೂಕಿನ ಗ್ರಾಮವೊಂದರ ಚರ್ಚ್‌ನಲ್ಲಿ 17 ವರ್ಷ 8 ತಿಂಗಳ ಬಾಲಕಿಯೊಂದಿಗೆ 24 ವರ್ಷದ ಯುವಕನ ಮದುವೆ ಮಾಡಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಗ್ರಾಮ ಪಂಚಾಯಿತಿ ಪಿಡಿಒ , ಬಾಲಕಿಯ ಶಾಲಾ ದಾಖಲೆ, ಆಧಾರ್‌ ಕಾರ್ಡ್‌ ಪರಿಶೀಲಿಸಿದಾಗ ಅಪ್ರಾಪ್ತೆ ಎಂಬುದು ದೃಢಪಟ್ಟಿದೆ. ವಿವಾಹಿತ ಯುವಕ, ಆತನ ಪೋಷಕರು ಹಾಗೂ ಇದಕ್ಕೆ ಸಹಕರಿಸಿದ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವರದಿ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.