ADVERTISEMENT

ಚಾಂಗಲೇರಾ: ಗಾಳಿ–ಮಳೆಗೆ ಉರುಳಿದ ಬಾಳೆ

​ಪ್ರಜಾವಾಣಿ ವಾರ್ತೆ
Published 28 ಮೇ 2024, 16:09 IST
Last Updated 28 ಮೇ 2024, 16:09 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದಲ್ಲಿ ಭಾನುವಾರ ಗಾಳಿ ಸಹಿತ ಮಳೆಯಾದ ಮರಿಣಾಮ ರೈತ ಜಗನ್ನಾಥ ವೀರಪ್ಪ ತೋಟದಲ್ಲಿನ ಮುರಿದು ಬಿದ್ದ ಬಾಳೆ ಗಿಡಗಳು
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದಲ್ಲಿ ಭಾನುವಾರ ಗಾಳಿ ಸಹಿತ ಮಳೆಯಾದ ಮರಿಣಾಮ ರೈತ ಜಗನ್ನಾಥ ವೀರಪ್ಪ ತೋಟದಲ್ಲಿನ ಮುರಿದು ಬಿದ್ದ ಬಾಳೆ ಗಿಡಗಳು   

ಚಿಟಗುಪ್ಪ: ತಾಲ್ಲೂಕಿನ ಚಾಂಗಲೇರಾ ಗ್ರಾಮದ ಶಿವಾರದಲ್ಲಿ ಭಾನುವಾರ ರಾತ್ರಿ ಸುರಿದ ಗಾಳಿ ಸಹಿತ ಮಳೆಗೆ  ಗ್ರಾಮದ ಜಗನ್ನಾಥ ವೀರಪ್ಪ ಅವರಿಗೆ ಸೇರಿದ ಬಾಳೆ ತೋಟದಲ್ಲಿನ ಗೊನೆಗಳು ಮುರಿದು ಬಿದ್ದಿವೆ.

ಬಾಳೆ ಗೊನೆ ಬಂದಿದ್ದ ಸುಮಾರು 400ಕ್ಕೂ ಹೆಚ್ಚು ಗಿಡಗಳು ನೆಲಕ್ಕೆ ಉರುಳಿ ಬಿದ್ದಿದ್ದು ₹8 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಗಾಳಿ, ಮಳೆಯಿಂದ ಬೆಳೆನಷ್ಟ ಅನುಭವಿಸಿದ್ದ ರೈತ ಜಗನ್ನಾಥ ಕಂದಾಯ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಿ ಪರಿಹಾರ ವಿತರಿಸಲು ಮನವಿ ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.