ADVERTISEMENT

ಸರ್ಕಾರಗಳ ಆಡಳಿತ ವೈಫಲ್ಯ ವರದಾನ: ಮೀನಾಕ್ಷಿ ಸಂಗ್ರಾಮ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 4:44 IST
Last Updated 1 ಡಿಸೆಂಬರ್ 2021, 4:44 IST
ಹುಲಸೂರಿನ ಬೇಲೂರ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರ ಪರ ಮುಖಂಡ ಪ್ರಚಾರ ನಡೆಸಿದರು
ಹುಲಸೂರಿನ ಬೇಲೂರ ಗ್ರಾಮದಲ್ಲಿ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರ ಪರ ಮುಖಂಡ ಪ್ರಚಾರ ನಡೆಸಿದರು   

ಕಮಲನಗರ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ನೆರವಾಗಲಿದೆ ಎಂದು ಕಾಂಗ್ರೆಸ್‌ ಔರಾದ್ ತಾಲ್ಲೂಕು ಉಸ್ತುವಾರಿ ಮೀನಾಕ್ಷಿ ಸಂಗ್ರಾಮ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಠಾಣಾಕುಶನೂರು ಹೋಬಳ್ಳಿ ವ್ಯಾಪ್ತಿಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಮಂಗಳವಾರ ವಿಧಾನ ಪರಿಷತ್ ಅಭ್ಯರ್ಥಿ ಭೀಮರಾವ್ ಪಾಟೀಲ ಪರ ಮತಯಾಚನೆ ವೇಳೆ ಅವರು ಮಾತನಾಡಿದರು.

ರಾಜ್ಯ ಸರ್ಕಾರದ ಆಡಳಿತ ಯಂತ್ರ ಕುಸಿದು ಬಿದ್ದಿದೆ. ಬಡವರು, ಕೃಷಿಕರು, ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದ ಕಾರ್ಯವೈಖರಿ ವಿರುದ್ಧ ಸ್ಥಳೀಯ ಸಂಸ್ಥೆ ಸದಸ್ಯರು ದನಿಯೆತ್ತಲಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡುವರು ಎಂದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ರಾಜಕುಮಾರ ಹಲಬುರ್ಗೆ ಮಾತನಾಡಿ, ಗ್ರಾಮ ಪಂಚಾಯಿತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಾಗಿ ಗೆದ್ದಿರುವುದು ನಮಗೆ ವರವಾಗಲಿದೆ. ಇದರ ಜತೆಗೆ ಬಿಜೆಪಿಯ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆ ಆಗಿದ್ದು ಗೆಲುವಿಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಅಭ್ಯರ್ಥಿ ಭೀಮರಾವ್ ಪಾಟೀಲ, ಮುಖಂಡ ಕನ್ನಿರಾಮ ರಾಠೋಡ್, ಗೋಪಿಕೃಷ್ಣ, ಆನಂದ ಚವ್ಹಾಣ್, ನೆಹರು ಪಾಟೀಲ, ಭೀಮಸೇನ ಸಿಂಧೆ, ವಿಶ್ವಾನಾಥ ದೀನೆ, ಸೋಮನಾಥ ಪಾಟೀಲ, ರಾಜಕುಮಾರ ಮಾನುರೆ, ಎಕಲಾರ ರಾಜಕುಮಾರ ಬಿರಾದಾರ, ಶೀವಶಂಕರ, ಅಮರ ದಾನಾ, ಸುನೀಲಕುಮಾರ ಇದ್ದರು.

ಮತಯಾಚನೆ

ಹುಲಸೂರ: ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ ಅವರು ಬೇಲೂರ, ಮಾಚನಾಳ್ ಸೇರಿದಂತೆ ವಿವಿಧೆಡೆ ಮತಯಾಚನೆ ಮಾಡಿದರು.

ರಾಜ್ಯದ ಜನರು ನೆಮ್ಮದಿಯಿಂದ ಇರಬೇಕಾದರೆ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇರಿಸಬೇಕು. ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮುಖಂಡ ವಿಜಯ ಸಿಂಗ್ ಮನವಿ ಮಾಡಿದರು.

ರಣಜೀತ ಗಾಯಕವಾಡ, ತ್ರಿಮುಖ ಜವಾಯಿ, ಸಂತೋಷ ಗುತ್ತೇದಾರ, ಜಿ.ಪಂ ಮಾಜಿ ಸದಸ್ಯ ಶಾಲುಬಾಯಿ ಬನಸೂಡೆ, ವಿವೇಕಾನಂದ ಚಳಕಾಪೂರೆ, ಮಗದುಮ್‌ ದಾವಲಜಿ, ಬಾಬು ರಾವ್ ಬಾಲಕುಂದೆ, ವಿಧ್ಯಸಾಗರ ಬನಸೂಡೆ, ಹಮ್ಮೀದ್‌, ಇಜಾಜ್ ಜಹಾಂಗೀರ್‌, ಶರಣು ಅಲಗೂಡ, ಆನಂದ ಹೋನ್ನನಾಯಕ, ಸಚಿನ್ ವಗ್ಗೆ, ಪ್ರಶಾಂತ ಪಾಟೀಲ್, ಮಹಮ್ಮದ್ ಮೀನಾಜ್‌, ವಿಕ್ರಮ ಮುಗಳೆ, ಶೈಲೇಂದ್ರ ಸಿಂಧೆ, ಸುನೀತಾ ವಗ್ಗೆ, ಪಪ್ಪು ಉದಾನೆ, ರವಿ ಗುಂಗೆ, ಧೂಳಪ್ಪ ಕಾಮಣ್ಣ, ಮಹಾದೇವ ಮಾಹಜನ್, ಹುಲೇಪ್ಪ ಹಾವಣ್ಣ, ಪ್ರಭು ಸೋನಕೇರೆ, ಬಸವರಾಜ ಎಕಲೂರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.