ADVERTISEMENT

ಉಪಕೇಂದ್ರಗಳಲ್ಲಿ ಮುಂದುವರಿದ ಲಸಿಕಾಕರಣ

18 ರಿಂದ 44 ವಯೋಮಾನದವರಿಗೆ ಕೊವಿಡ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 14:20 IST
Last Updated 27 ಮೇ 2021, 14:20 IST
ಹುಲಸೂರಿನ ಲಸಿಕಾ ಕೇಂದ್ರದಲ್ಲಿ ಅಂಗವಿಕಲರಿಗೆ ಕೋವಿಡ್ ಲಸಿಕೆ ನೀಡಲಾಯಿತು
ಹುಲಸೂರಿನ ಲಸಿಕಾ ಕೇಂದ್ರದಲ್ಲಿ ಅಂಗವಿಕಲರಿಗೆ ಕೋವಿಡ್ ಲಸಿಕೆ ನೀಡಲಾಯಿತು   

ಬೀದರ್: ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ, ಬೀದರ್, ಹುಮನಾಬಾದ್, ಔರಾದ್, ಹುಲಸೂರು, ಕಮಲನಗರ ಮತ್ತು ಚಿಟಗುಪ್ಪ ತಾಲ್ಲೂಕಿನ ವಿವಿಧ ಹೋಬಳಿಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗುರುವಾರ 18 ರಿಂದ 44 ವಯೋಮಾನದ ದುರ್ಬಲ ವರ್ಗದ ಫಲಾನುಭವಿಗಳು ಹಾಗೂ ಫ್ರಂಟ್‍ಲೈನ್ ವರ್ಕರ್ಸ್‍ಗೆ ಕೋವಿಡ್ ಲಸಿಕೆ ನೀಡಲಾಯಿತು.

ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಗವಿಕಲರ ಲಸಿಕಾಕರಣ ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ, ತಹಶೀಲ್ದಾರ್ ಸಾವಿತ್ರಿ ಸಲಗರ ಭೇಟಿ ನೀಡಿ ಪರಿಶೀಲಿಸಿದರು. ಕೋವಿಡ್ ಲಸಿಕಾಕರಣ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಮುಡಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ಅಧಿಕಾರಿ ಡಾ.ಆಶೀಸ್ ಪಾಟೀಲ ಮಾಹಿತಿ ನೀಡಿದರು.

ಕೋಡಂಬಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿ ಮತ್ತು ಬಗದಲ್ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಔರಾದ್ (ಎಸ್) ಮತ್ತು ಭೈರನಳ್ಳಿ ಗ್ರಾಮಗಳಲ್ಲಿ ವೈದ್ಯಾಧಿಕಾರಿ ಸಂಗಾರೆಡ್ಡಿ ಕೆ ಅವರ ಸಮ್ಮುಖದಲ್ಲಿ ಲಸಿಕಾಕರಣ ನಡೆಯಿತು.

ADVERTISEMENT

ಬೀದರ್ ತಾಲ್ಲೂಕು: ತಹಶೀಲ್ದಾರ್ ಗಂಗಾದೇವಿ ನೇತೃತ್ವದಲ್ಲಿ ಎಪಿಎಂಸಿಯಲ್ಲಿ, 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಡಾ.ಸೊಹೇಲ್ ನೇತೃತ್ವದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಕೊವಿಡ್ ಲಸಿಕೆ ಕೊಡಲಾಯಿತು.

ಭಾಲ್ಕಿ ತಾಲ್ಲೂಕು: ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ, ಭಾಲ್ಕಿ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ ಅವರ ಸಮ್ಮುಖದಲ್ಲಿ ಮಾನಸಿಕ ಅಸ್ವಸ್ಥರಿಗೆ ಲಸಿಕೆ ನೀಡಲಾಯಿತು.

ಔರಾದ್ ತಾಲ್ಲೂಕು: ಔರಾದ್ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಿದ್ಧಾರ್ಥ ಮೇಲಕುಂಡೆ ನೇತೃತ್ವದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ಹೆಡಗಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿ ಹಾಗೂ ಸಂತಪುರ ಪಂಚಾಯಿತಿಯಲ್ಲಿ ಡಾ.ಮಹೇಶ ಬಿರಾದಾರ ನೇತೃತ್ವದಲ್ಲಿ ಲಸಿಕಾಕರಣ ನಡೆಯಿತು.

ಹುಲಸೂರು ತಾಲ್ಲೂಕು: ಹುಲಸೂರ ಗ್ರಾಮ ಪಂಚಾಯಿತಿಯಲ್ಲಿ ಲಸಿಕೆ ನೀಡಲಾಯಿತು.
ಚಿಟಗುಪ್ಪ ತಾಲ್ಲೂಕು: ಚಿಟಗುಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವೈದ್ಯಾಧಿಕಾರಿ ಡಾ.ಕಿರಣ್ ಪಾಟೀಲ ಸಮ್ಮುಖದಲ್ಲಿ ಕೋವಿಡ್ ಲಸಿಕಾಕರಣ ನಡೆಯಿತು.

ಬಸವಕಲ್ಯಾಣ ತಾಲ್ಲೂಕು: ಸಾರ್ವಜನಿಕ ಆಸ್ಪತ್ರೆ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಬಸವಕಲ್ಯಾಣ ನಗರದ ನಗರಸಭೆ ಕಚೇರಿ ಆವರಣದಲ್ಲಿ 18 ರಿಂದ 44 ವಯೋಮಾನದ ಫ್ರಂಟ್‍ಲೈನ್ ವಕ್ರ್ಸರ್ಸ್ ಮತ್ತು ದುರ್ಬಲ ಗುಂಪಿನವರಿಗೆ ಕೋವಿಡ್ ಲಸಿಕೆ ಕೊಡಲಾಯಿತು.

ಕಮಲನಗರ ತಾಲ್ಲೂಕು: ತಹಶೀಲ್ದಾರ್ ರಮೇಶ ಪೆದ್ದೆ ನೇತೃತ್ವದಲ್ಲಿ ಬೆಳಕುಣಿ (ಬಿ) ಗ್ರಾಮದಲ್ಲಿ ಕೋವಿಡ್ ಲಸಿಕಾಕರಣ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.