ADVERTISEMENT

ಹಳೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 15:53 IST
Last Updated 13 ಆಗಸ್ಟ್ 2024, 15:53 IST
ಬೀದರ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಳವಡಿಸಿರುವ ಡಯಾಲಿಸಿಸ್ ಯಂತ್ರಗಳು
ಬೀದರ್‌ನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅಳವಡಿಸಿರುವ ಡಯಾಲಿಸಿಸ್ ಯಂತ್ರಗಳು    

ಬೀದರ್: ನಗರದ ಓಲ್ಡ್ ಸಿಟಿಯ 100 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರು ಹಾಸಿಗೆಗಳ ಡಯಾಲಿಸಿಸ್ ಸೇವೆ ಆರಂಭಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಮತಿ ನೀಡಿದ್ದು ಶೀಘ್ರದಲ್ಲೇ ಚಾಲನೆ ಸಿಗಲಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ₹64.48 ಲಕ್ಷದಲ್ಲಿ ಆರು ಡಯಾಲಿಸಿಸ್ ಯಂತ್ರ, ಹಾಸಿಗೆ, ಆರ್.ಒ. ಪ್ಲಾಂಟ್ ಹಾಗೂ ಅಗತ್ಯ ಸಲಕರಣೆಗಳನ್ನು ಅಳವಡಿಸಲಾಗಿದೆ.

‘ನಗರದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಷ್ಟೇ ಡಯಾಲಿಸಿಸ್ ಸೇವೆ ಇತ್ತು. ಸಹಜವಾಗಿಯೇ ಅದರ ಹೆಚ್ಚಿನ ಒತ್ತಡ ಇದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲೂ ಸೇವೆ ಪ್ರಾರಂಭಿಸಬೇಕು ಎನ್ನುವುದು ರೋಗಿಗಳ ಬೇಡಿಕೆಯಾಗಿತ್ತು. ಬಹು ದಿನಗಳ ಬೇಡಿಕೆ ಈಗ ಈಡೇರುತ್ತಿದೆ’ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ತಿಳಿಸಿದ್ದಾರೆ.

ADVERTISEMENT

‘ಡಯಾಲಿಸಿಸ್ ಸೇವೆಗಾಗಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಮಂಡಳಿ ಪ್ರಸ್ತಾವಕ್ಕೆ ಮಂಜೂರಿ ನೀಡಿತ್ತು. ಈಗಾಗಲೇ ೬ ಡಯಾಲಿಸಿಸ್ ಯಂತ್ರ ಹಾಗೂ ಇತರ ಉಪಕರಣಗಳನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಡಯಾಲಿಸಿಸ್ ಸೇವೆ ಆರಂಭದಿಂದ ಓಲ್ಡ್ ಸಿಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೋಗಿಗಳಿಗೆ ನೆರವಾಗಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.