ADVERTISEMENT

ಬೀದರ್: ರೋಗಿಗಳಿಗೆ ಆಹಾರ ಪೊಟ್ಟಣ ವಿತರಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2021, 17:16 IST
Last Updated 24 ಏಪ್ರಿಲ್ 2021, 17:16 IST
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಭಗತ್‍ಸಿಂಗ್ ಯುತ್ ಬ್ರಿಗೇಡ್ ಪದಾಧಿಕಾರಿಗಳು ರೋಗಿಗಳಿಗೆ ಉಚಿತ ಆಹಾರ ಪೊಟ್ಟಣ ವಿತರಿಸಿದರು
ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಯ ಆವರಣದಲ್ಲಿ ಶನಿವಾರ ಭಗತ್‍ಸಿಂಗ್ ಯುತ್ ಬ್ರಿಗೇಡ್ ಪದಾಧಿಕಾರಿಗಳು ರೋಗಿಗಳಿಗೆ ಉಚಿತ ಆಹಾರ ಪೊಟ್ಟಣ ವಿತರಿಸಿದರು   

ಬೀದರ್: ಭಗತ್‍ಸಿಂಗ್ ಯುತ್ ಬ್ರಿಗೇಡ್ ಪದಾಧಿಕಾರಿಗಳು ಶನಿವಾರ ಇಲ್ಲಿಯ ಬ್ರಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉಚಿತ ಆಹಾರ ಪೊಟ್ಟಣ ವಿತರಿಸಿದರು.

ಸುಮಾರು 200ಕ್ಕೂ ಹೆಚ್ಚು ಜನರಿಗೆ ವೆಜ್ ಬಿರಿಯಾನಿಯ ಪೊಟ್ಟಣ ನೀಡಿದರು.

‘ಬ್ರಿಗೇಡ್‍ನಿಂದ ಅಕ್ಟೋಬರ್ 3ರಿಂದ ಪ್ರತಿ ಶನಿವಾರ ರೋಗಿಗಳಿಗೆ ಅನ್ನ ದಾಸೋಹ ಮಾಡುತ್ತ ಬರಲಾಗಿದೆ. ಇದು, ನಿರಂತರ ಮುಂದುವರಿಯಲಿದೆ’ ಎಂದು ಬ್ರಿಗೇಡ್ ಅಧ್ಯಕ್ಷ ಜಸ್‍ಪ್ರೀತ್‍ಸಿಂಗ್ (ಮೊಂಟಿ) ತಿಳಿಸಿದರು.

ADVERTISEMENT

‘ಜಿಲ್ಲಾ ಆಸ್ಪತ್ರೆಗೆ ಬಹುತೇಕ ಬಡ ರೋಗಿಗಳೇ ಬರುತ್ತಾರೆ. ಅವರಿಗೆ ಉತ್ತಮ ಆಹಾರ ದೊರಕಬೇಕು ಎನ್ನುವುದು ಅನ್ನ ದಾಸೋಹದ ಉದ್ದೇಶವಾಗಿದೆ’ ಎಂದು ಹೇಳಿದರು.

ಬ್ರಿಗೇಡ್ ಕಾರ್ಯದರ್ಶಿ ಸಂಗಮೇಶ ಪಾಟೀಲ, ಚರಣ್‍ಸಿಂಗ್, ಆಕಾಶಸಿಂಗ್, ಜಸ್‍ವಿಂದರ್ ಸಿಂಗ್, ಆಕಾಶ ಶರಣಾರ್ಥಿ, ಅಮಿತ್ ಹೇಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.