ಜನವಾಡ: ಬೆಂಗಳೂರಿನ ಮಹಾ ಬೋಧಿ ಸೊಸೈಟಿ ಸಂಸ್ಥಾಪಕ ಬುದ್ಧ ರಖ್ಖಿತ ಭಂತೆ ಅವರ 100ನೇ ಜನ್ಮದಿನದ ಪ್ರಯುಕ್ತ ಬೀದರ್ ತಾಲ್ಲೂಕಿನ ರೇಕುಳಗಿ ಮೌಂಟ್‍ನ ಅನಾಥ ಪಿಂಡಕ ಬುದ್ಧ ವಿಹಾರದಲ್ಲಿ ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಆಹಾರಧಾನ್ಯ ಕಿಟ್ ವಿತರಿಸಲಾಯಿತು.
ರೇಕುಳಗಿ, ಬೋರಾಳ, ಮನ್ನಾಎಖ್ಖೆಳ್ಳಿ, ಮೀನಕೇರಾ ಕ್ರಾಸ್‍ನಲ್ಲಿ ವಾಸವಾಗಿರುವ ಬಡವರು, ಅಂಗವಿಕಲರು, ವಿಧವೆಯರು ಹಾಗೂ ನಿರಾಶ್ರಿತರಿಗೆ ವಿವಿಧ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಣೆ ಮಾಡಲಾಯಿತು.
ಭಂತೆ ರೇವತ, ಭಂತೆ ಧರ್ಮಪಾಲ್, ಭಂತೆ ಬೋಧಿ, ಭಿಕ್ಕುಣಿ ಮಹಾ ಪ್ರಜಾಪತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.