ADVERTISEMENT

ಡಾ.ಅಂಬೇಡ್ಕರ್ ನ್ಯಾಯ ಶಾಸ್ತ್ರಜ್ಞ: ಸಂಗಮೇಶ ಭಾವಿದೊಡ್ಡಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 7:13 IST
Last Updated 9 ಡಿಸೆಂಬರ್ 2025, 7:13 IST
ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು
ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು   

ಅಲಿಯಂಬರ(ಜನವಾಡ): ‘ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಸಮಾಜ ಸುಧಾರಕ, ಆರ್ಥಿಕ ತಜ್ಞ ಹಾಗೂ ನ್ಯಾಯ ಶಾಸ್ತ್ರಜ್ಞರೂ ಆಗಿದ್ದರು’ ಎಂದು ಸಾಮಾಜಿಕ ಕಾರ್ಯಕರ್ತ ಸಂಗಮೇಶ ಭಾವಿದೊಡ್ಡಿ ಹೇಳಿದರು.

ಬೀದರ್ ತಾಲ್ಲೂಕಿನ ಅಲಿಯಂಬರ ಗ್ರಾಮದಲ್ಲಿ ಈಚೆಗೆ ನಡೆದ ಡಾ.ಅಂಬೇಡ್ಕರ್ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರರು, ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಹೋರಾಟ ನಡೆಸಿದ್ದರು. ಅವರ ಹೋರಾಟದ ಫಲವಾಗಿಯೇ ದೇಶದಾದ್ಯಂತ ಕೋಟ್ಯಂತರ ಜನ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಅಸಮಾನತೆ ತೀವ್ರವಾಗಿದ್ದ ಕಾಲ ಘಟ್ಟದಲ್ಲಿ ಎಲ್ಲ ನೋವುಗಳನ್ನು ನುಂಗಿ ಅಧ್ಯಯನದಿಂದ ಸಾಧನೆ ಮಾಡಿದ್ದರು’ ಎಂದು ಹೇಳಿದರು.

ADVERTISEMENT

ಪ್ರಮುಖರಾದ ರಾಜಕುಮಾರ ಭಾವಿದೊಡ್ಡಿ, ಪ್ರದೀಪ್‍ಕುಮಾರ, ಚಿನ್ನಮ್ಮ ದೊಡ್ಡಮನಿ, ಮೀನಮ್ಮ ಭಾವಿದೊಡ್ಡಿ, ಶಾಂತಮ್ಮ ಸಾಧುರೆ, ಪೂಜಾ, ಲಕ್ಷ್ಮಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.