ADVERTISEMENT

ಸಮಾನತೆ ಸಮಾಜ ಕಟ್ಟಿದ್ದು ಶರಣರು: ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:03 IST
Last Updated 21 ಅಕ್ಟೋಬರ್ 2024, 16:03 IST
ಔರಾದ್‌ ಪಟ್ಟಣದಲ್ಲಿ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು
ಔರಾದ್‌ ಪಟ್ಟಣದಲ್ಲಿ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು   

ಔರಾದ್: 12ನೇ ಶತಮಾನದ ಶರಣರು ಜಾತಿಯತೆ, ಅಸಮಾನತೆ ಮೆಟ್ಟಿ ನಿಂತು ಸಮಾನತೆಯ ಸಮಾಜ ಕಟ್ಟಿದರು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಪಟ್ಟಣದ ಅನುಭವ ಮಂಟಪದಲ್ಲಿ ಭಾರತೀಯ ಬಸವ ಬಳಗ ಭಾನುವಾರ ಆಯೋಜಿಸಿದ್ದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶರಣರ ಸಮಾನತೆ ಚಿಂತನೆ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಹೀಗಾಗಿ ಅವರ ಸಂದೇಶ ಈಗ ವಿಶ್ವವ್ಯಾಪಿಯಾಗಿವೆ ಎಂದು ಹೇಳಿದರು.

ಭಾಲ್ಕಿ ಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ಮನೆ ಮನೆಗೆ ಬಸವ ಸಂದೇಶ ಮುಟ್ಟಿಸುವ ಇಂತಹ ಕಾರ್ಯ ಎಲ್ಲ ಕಡೆ ನಡೆಯಬೇಕು. ಶರಣ ಸಂಸ್ಕಾರ ಇದ್ದಲ್ಲಿ ಶಾಂತಿ, ನೆಮ್ಮದಿ, ಸಮೃದ್ಧಿ ಇರುತ್ತದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಾಯತ್ರಿ ಭಾಲ್ಕಿ, ಮಠದ ಮೂಲಕ ಈ ಭಾಗದಲ್ಲಿ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಸಿಗುತ್ತಿದೆ. ಇದಕ್ಕಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ ಎಂದರು.

ನಿವೃತ್ತ ಪ್ರಾಂಶುಪಾಲ ಜಗನ್ನಾಥ ಮೀಸೆ ಮಾತನಾಡಿದರು. ಬಸವ ಸಮಿತಿ ಅಧ್ಯಕ್ಷ ಧನರಾಜ ರಾಗಾ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಜುಮ್ಮಾ, ಧನರಾಜ ಕೋಣೆ, ರತಿಕಾಂತ ಖರಜಿಗೆ, ಅಂಕುಶ ದೇಶಮುಖ, ಪವನಕುಮಾರ ಕೋಣೆ ಉಪಸ್ಥಿತರಿದ್ದರು. ಸಂಗಪ್ಪ ಘಾಟೆ ದಂಪತಿ ಷಟಸ್ಥಳ ಧ್ವಜಾರೋಹಣ ನೆರವೇರಿಸಿದರು.

ವಿಜಯಲಕ್ಷ್ಮಿ ಶಿವಕುಮಾರ ಘಾಟೆ ದಂಪತಿ ಬಸವಪೂಜೆ ಸಲ್ಲಿಸಿದರು. ಜಗನ್ನಾಥ ಮೂಲಗೆ ಸ್ವಾಗತಿಸಿದರು. ಶರಣಪ್ಪ ನಾಗಲಗಿದ್ದೆ ನಿರೂಪಿದರು. ಸಂತೋಷ ಘಾಟೆ ವಂದಿಸಿದರು. ಎಕಲಾರ ಶಾಲೆಯ ಮಕ್ಕಳಿಂದ ವಚನ ನೃತ್ಯ ನೆಡೆಯಿತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘೂಳೆ,  ಸಂಗಮೇಶ ಜ್ಯಾಂತೆ, ಜಂಬಗಿ ಗ್ರಾ.ಪಂ.ಅಧ್ಯಕ್ಷೆ ಸುಮನಬಾಯಿ ಪಾಟೀಲ್, ಪಿಡಿಒ ಶರಣಪ್ಪ ಗಾದಗೆ ಅವರನ್ನು ಸತ್ಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.