ಬೀದರ್: ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ನಗರದ ರಾಮ ಮಂದಿರದಲ್ಲಿ ಭಾನುವಾರ ನಡೆದ ಗಣೇಶ ಮಹಾಮಂಡಳ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ವಿವಿಧ ಗಣೇಶ ಮಂಡಳಿಯ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಗಣೇಶ ಉತ್ಸವದ ಗೌರವ ಅಧ್ಯಕ್ಷರಾಗಿ, ನಗರಸಭೆ ಸದಸ್ಯ ಚಂದ್ರಶೇಖರ ಪಾಟೀಲ ಗಾದಗಿ ಅವರನ್ನು ಅಧ್ಯಕ್ಷರಾಗಿ ಹಾಗೂ ಬಿಜೆಪಿ ಮುಖಂಡ ಬಾಬುವಾಲಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ರಜನೀಶ ವಾಲಿ ಅವರನ್ನು ಖಜಾಂಚಿ ಆಗಿ ಆಯ್ಕೆ ಮಾಡಲಾಯಿತು.
ಈಶ್ವರ ಸಿಂಗ್ ಠಾಕೂರ್, ರೇವಣಸಿದ್ದಪ್ಪ ಜಲಾದೆ, ದೀಪಕ್ ವಾಲಿ, ರಾಜು ಚಿದ್ರಿ, ಮಹೇಶ ಪಾಲಂ, ಬಸವರಾಜ ಪವಾರ, ಸತೀಶ ಮೊಟ್ಟಿ, ಸುನೀಲ್ ದಳವೆ, ಮನೋಹರ ದಂಡೆ, ನರೇಶ ಗೌಳಿ, ಗೋರಖನಾಥ ಗೌಳಿ (ಉಪಾಧ್ಯಕ್ಷರು), ಸುಭಾಷ ಮಡಿವಾಳ, ವೀರಶೆಟ್ಟಿ ಪಾಟೀಲ ನೌಬಾದ್, ಭರತ ಶೆಟಕಾರ, ಅರುಣ್ ಬಸವನಗರ, ಮಹೇಶ್ವರ ಸ್ವಾಮಿ, ನಿಲೇಶ ರಕ್ಷ್ಯಾಳ, ವೀರೇಶ ಸ್ವಾಮಿ, ಸುನೀಲ ದಳವೆ, ಶ್ರೀಮಂತ ಸಪಾಟೆ, ನವೀನ್ ರೋಷನ್ ವರ್ಮಾ, ಗಣೇಶ ಭೋಸ್ಲೆ, ಮುನ್ನಾ ಆರ್ಯ, ರಾಜಾರಾಮ ಚಿಟ್ಟಾ, ದೇವೇಂದ್ರ ಎಮ್ಮೆಕರ್, ಸನ್ನಿ ಪಾಟೀಲ (ಕಾರ್ಯದರ್ಶಿಗಳು). ಸ್ವಾಗತ ಸಮಿತಿಗೆ ನಂದಕಿಶೋರ್ ವರ್ಮಾ (ಅಧ್ಯಕ್ಷ), ಸುಭಾಷ ಚೋಳಕರ್, ಚಂದ್ರಶೇಖರ ಗಾದಾ (ಕಾರ್ಯದರ್ಶಿಗಳು). ನಗರ ಅಲಂಕಾರ ಸಮಿತಿಗೆ ಹಣಮಂತ ಬುಳ್ಳಾ (ಅಧ್ಯಕ್ಷ), ಮೆರವಣಿಗೆ ಸಮಿತಿಗೆ ಸೂರ್ಯಕಾಂತ ಶೆಟಕಾರ (ಗೌರವ ಅಧ್ಯಕ್ಷ), ಸೋಮಶೇಖರ ಪಾಟೀಲ ಗಾದಗಿ (ಅಧ್ಯಕ್ಷ), ಶಶಿಧರ ಹೊಸಳ್ಳಿ (ಪ್ರಧಾನ ಕಾರ್ಯದರ್ಶಿ), ನವೀನ ಚಿಟ್ಟಾ, ಆನಂದ ಘಂಟೆ, ಕೈಲಾಶ ಕಾಜಿ, ಸಂಜು ಜೀರ್ಗೆ, ನಾಗರಾಜ ಹುಲಿ, ಕಲ್ಯಾಣರಾವ್ ಬಿರಾದಾರ (ಕಾರ್ಯದರ್ಶಿಗಳು).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.