ADVERTISEMENT

ಮಾಣಿಕನಗರ; ಡಿ,6ರಿಂದ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 8:55 IST
Last Updated 4 ಡಿಸೆಂಬರ್ 2019, 8:55 IST
ಆನಂದರಾಜ ಮಾಣಿಕಪ್ರಭು
ಆನಂದರಾಜ ಮಾಣಿಕಪ್ರಭು   

ಹುಮನಾಬಾದ್: ಸಮೀಪದ ಮಾಣಿಕನಗರದ ಮಾಣಿಕಪ್ರಭುಗಳ 154ನೇ ಪುಣ್ಯತಿಥಿ ಹಾಗೂ 202ನೇ ಶ್ರೀಪ್ರಭು ಅವತಾರ ಜಯಂತಿ ಮಹೋತ್ಸವ ಡಿ.6ರಿಂದ 14ರವರೆಗೆ ನಡೆಯಲಿದೆ ಎಂದು ಮಾಣಿಕಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದರಾಜ ಮಾಣಿಕಪ್ರಭುಗಳು ತಿಳಿಸಿದರು.

ತಾಲ್ಲೂಕಿನ ಮಾಣಿಕನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

ಡಿ.6 ರಂದು ಮಧಾಹ್ನ 3 ಗಂಟೆಗೆ ತೀರ್ಥಸ್ನಾನ ಹಾಗೂ ಯೋಗ ದಂಡ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಳ್ಳಲಿದೆ.

ADVERTISEMENT

ಡಿ.7 ರಂದು ಗಣಪತಿ ಪೂಜೆ, ಚಂಡಿ ಪಾಠ, ಸಕಲದೇವತಾ ನಿಮಂತ್ರಣ, 8 ರಂದು 150ನೇ ಪ್ರಭುಗಳ ಪುಣ್ಯತಿಥಿ, 9 ರಂದು ದ್ವಾದಶಿ, ಸಂಗಮ ಸ್ನಾನ. 10 ರಂದು ದಕ್ಷಿಣ ದರ್ಬಾರ್ 11ರಂದು ಗುರು ಪೂಜನ್, ಶ್ರೀಮಾಣಿಕ ಪೌರ್ಣಿಮಾ ಪರ್ವ. 12 ರಂದು 202ನೇ ಪ್ರಭು ಜಯಂತಿ, 13 ರಂದು ಪ್ರಭು ದರ್ಬಾರ್ ನಡೆಯಲಿದೆ.

ಮಧ್ಯರಾತ್ರಿ 12.30ಕ್ಕೆ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಸಂಗೀತ ಕಲಾವಿದರು ಕಲಾ ಪ್ರದರ್ಶನ ನೀಡಲಿದ್ದಾರೆ. 14 ರಂದು ಶೋಭಾ ಯಾತ್ರೆ ಜರುಗಲಿದೆ ಎಂದು ಮಾಹಿತಿ ನೀಡಿದರು.

ಸಂಸ್ಥಾನದ ಸಹ ಕಾರ್ಯದರ್ಶಿ ಚೈತನ್ಯರಾಜ ಪ್ರಭು, ವಸಂತ ನಾಯಕ, ಮಹಾದೇವ ಜಲಸಿಂಗಿ ಹಾಗೂ ಕಿರಣ ತಗಡಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.