ADVERTISEMENT

ರೈತರ ಉತ್ಪನ್ನಗಳಿಗೆ ಕಮಿಷನ್: ರೈತ ಸಂಘ ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:35 IST
Last Updated 26 ಅಕ್ಟೋಬರ್ 2024, 15:35 IST
ಬೀದರ್ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ರೈತ ಮುಖಂಡರು ಭೇಟಿ ನೀಡಿ ರೈತರ ಉತ್ಪನ್ನಗಳಿಗೆ ಕಮೀಷನ್ ಪಡೆಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿ  ಮನವಿಪತ್ರ ಸಲ್ಲಿಸಿದರು 
ಬೀದರ್ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ರೈತ ಮುಖಂಡರು ಭೇಟಿ ನೀಡಿ ರೈತರ ಉತ್ಪನ್ನಗಳಿಗೆ ಕಮೀಷನ್ ಪಡೆಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿ  ಮನವಿಪತ್ರ ಸಲ್ಲಿಸಿದರು    

ಬೀದರ್: ಕೃಷಿ ಮಾರುಕಟ್ಟೆಯಲ್ಲಿ ರೈತರ ಉತ್ಪನ್ನಗಳಿಗೆ ಕಮಿಷನ್ ಪಡೆಯುವುದನ್ನು ನಿಲ್ಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.

ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಶನಿವಾರ ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿ ಮನವಿಪತ್ರ ಸಲ್ಲಿಸಿದರು.

‘ಮಾರುಕಟ್ಟೆಗೆ ತಂದ ರೈತರ ಉತ್ಪನ್ನಗಳಿಗೆ ತೂಕದಲ್ಲಿ ಮೋಸ ಮಾಡಲಾಗುತ್ತಿದೆ. ಪ್ರತಿ ಕ್ವಿಂಟಲ್‌ಗೆ 1.50 ಕೆಜಿ ಕಡಿತ ಮಾಡುವುದರ ಜತೆಗೆ ಶೇ 2ರಷ್ಟು ಕಮೀಷನ್ ತೆಗೆದುಕೊಳ್ಳಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಈ ಸಲ ಮಳೆ ಜಾಸ್ತಿಯಾಗಿ ಮುಂಗಾರು ಬೆಳೆ ಹಾಳಾಗಿದೆ. ರೈತರು ಬಹಳ ಕಷ್ಟಪಟ್ಟು ಬೆಳೆ ಬೆಳೆಸಿದ್ದಾರೆ. ಇಳುವರಿಯೂ ಕಡಿಮೆಯಾಗಿದೆ. ಸೋಯಾಬಿನ್‌ ಬೆಲೆಯೂ ಕಡಿಮೆ ಇದೆ. ಇಂತಹ ಸಮಯದಲ್ಲಿ ರೈತರಿಗೆ ವಂಚಿಸುವುದು ಸರಿಯಲ್ಲ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳಿಗೆ ಅನೇಕ ಸಲ ಮನವಿ ಸಲ್ಲಿಸಿದರೂ ರೈತರ ಮೇಲಿನ ವಂಚನೆ ನಿಲ್ಲುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.

ಶಂಕರೆಪ್ಪ ಪಾರಾ, ಶೇಷರಾವ ಕಣಜಿ, ಚಂದ್ರಶೇಖರ ಜಮಖಂಡಿ, ಸುವರ್ಣಾ ಬಳತೆ, ಮಹಾನಂದಾ ದೇಶಮುಖ, ಶೋಭಾವತಿ ಕಾರಭಾರಿ, ಸುಭಾಷ ರಗಟೆ, ಪ್ರವೀಣ ಕುಲಕರ್ಣಿ, ಬಾಬುರಾವ ಜೋಳದಾಬಕಾ, ರೇವಣಸಿದ್ದಪ್ಪ ಯರಬಾಗ, ನಾಗಯ್ಯಾ ಸ್ವಾಮಿ, ಪ್ರಕಾಶ ಬಾವುಗೆ, ಶಿವಾನಂದ ಹುಡಗೆ, ಮಲ್ಲಿಕಾರ್ಜುನ ಚಕ್ಕಿ, ಸುಮಂತ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.