
ಪ್ರಜಾವಾಣಿ ವಾರ್ತೆಅವಿನಾಶ್
ಬೀದರ್: ಐದು ವರ್ಷದ ಬಾಲಕ ಚರಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮಲಿಕ್ ಮರ್ಜಾಪುರ ಗ್ರಾಮದಲ್ಲಿ ನಡೆದಿದೆ.
ಅವಿನಾಶ್ (5) ಮೃತ ಬಾಲಕ. ಶಿವರಾತ್ರಿ ಹಬ್ಬಕ್ಕೆಂದು ಅವಿನಾಶ್ ಪೋಷಕರೊಂದಿಗೆ ಅಜ್ಜಿಯ ಮನೆಗೆ ಬಂದಿದ್ದ. ಶುಕ್ರವಾರ ರಾತ್ರಿ ಮನೆ ಮುಂದೆ ಆಟವಾಡುತ್ತ ರಾಜ ಕಾಲುವೆಗೆ ಬಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಘಟನೆ ನಡೆದಾಗ ವಯಸ್ಕರು ಅಲ್ಲಿರಲಿಲ್ಲ ಎಂದು ಗೊತ್ತಾಗಿದೆ. ಬಳಿಕ ವಿಷಯ ತಿಳಿದು ಬಾಲಕನನ್ನು ತೆಗೆಯುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಬಗದಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.