ADVERTISEMENT

ಧರ್ಮಸಿಂಗ್ ಫೌಂಡೇಷನ್‌ನಿಂದ ಉಚಿತ ಆಂಬುಲೆನ್ಸ್ ಸೇವೆ

​ಪ್ರಜಾವಾಣಿ ವಾರ್ತೆ
Published 19 ಮೇ 2021, 4:09 IST
Last Updated 19 ಮೇ 2021, 4:09 IST
ಬಸವಕಲ್ಯಾಣದಲ್ಲಿ ಮಂಗಳವಾರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಕೊಡುಗೆಯಾಗಿ ನೀಡಿರುವ ಉಚಿತ ಆಂಬುಲೆನ್ಸ್ ಸೇವೆಗೆ ತಹಶೀಲ್ದಾರ್ ಸಾವಿತ್ರಿ ಸಲಗರ ಚಾಲನೆ ನೀಡಿದರು
ಬಸವಕಲ್ಯಾಣದಲ್ಲಿ ಮಂಗಳವಾರ ವಿಧಾನಪರಿಷತ್ ಸದಸ್ಯ ವಿಜಯಸಿಂಗ್ ಕೊಡುಗೆಯಾಗಿ ನೀಡಿರುವ ಉಚಿತ ಆಂಬುಲೆನ್ಸ್ ಸೇವೆಗೆ ತಹಶೀಲ್ದಾರ್ ಸಾವಿತ್ರಿ ಸಲಗರ ಚಾಲನೆ ನೀಡಿದರು   

ಬಸವಕಲ್ಯಾಣ: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಕೊಡುಗೆಯಾಗಿ ನೀಡಿರುವ ಧರ್ಮಸಿಂಗ್ ಫೌಂಡೇಷನ್‌ನ ಉಚಿತ ಆಂಬುಲೆನ್ಸ್ ಸೇವೆಗೆ ನಗರದ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ತಹಶೀಲ್ದಾರ್ ಸಾವಿತ್ರಿ ಸಲಗರ ಚಾಲನೆ ನೀಡಿದರು. ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ತಾಲ್ಲೂಕು ಆಸ್ಪತ್ರೆ ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಮುಖಂಡರಾದ ಬಾಬು ಹೊನ್ನಾನಾಯಕ್, ತಹಶೀನಅಲಿ ಜಮಾದಾರ, ಸಂಜಯಸಿಂಗ್ ಹಜಾರಿ, ನಗರಸಭೆ ಸದಸ್ಯರಾದ ರವೀಂದ್ರ ಬೋರೋಳೆ, ರಾಮ ಜಾಧವ, ಸಂತೋಷ ಗುತ್ತೇದಾರ, ಅಮಾನತ ಅಲಿ, ಶರಣು ಆಲಗೂಡ, ಸೋನುಸಿಂಗ್ ಹಜಾರಿ, ಮಹ್ಮದ್ ಉಪಸ್ಥಿತರಿದ್ದರು.

ಎರಡು ಆಂಬುಲೆನ್ಸ್ ಉಚಿತ ಸೇವೆಗೆ ಲಭ್ಯವಿದ್ದು ಚಾಲಕರ ಭತ್ಯೆ, ಡೀಸೆಲ್ ಹಣ ಸಹ ಧರ್ಮಸಿಂಗ್ ಫೌಂಡೇಷನ್ ಬಸವಕಲ್ಯಾಣ ವತಿಯಿಂದಲೇ ನೀಡಲಾಗುತ್ತದೆ. ಅವಶ್ಯಕತೆ ಇದ್ದವರು ಇವುಗಳನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಆಂಬುಲೆನ್ಸ್‌ಗಾಗಿ 9620171108, 9620181108 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.