ADVERTISEMENT

203 ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಉಚಿತವಾಗಿ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 13:49 IST
Last Updated 22 ಮೇ 2025, 13:49 IST
ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ವಿವಿಧ ಸಲಕರಣೆ ಉಚಿತವಾಗಿ ವಿತರಿಸಲಾಯಿತು
ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ವಿವಿಧ ಸಲಕರಣೆ ಉಚಿತವಾಗಿ ವಿತರಿಸಲಾಯಿತು   

ಮಂದಕನಳ್ಳಿ(ಜನವಾಡ): ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರ ಹಾಗೂ ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ವತಿಯಿಂದ ಬೀದರ್ ತಾಲ್ಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಈಚೆಗೆ 203 ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಉಚಿತವಾಗಿ ಸಲಕರಣೆ ವಿತರಿಸಲಾಯಿತು.

ವ್ಹೀಲ್ ಚೇರ್, ಸ್ನಾನದ ಕುರ್ಚಿ, ಆಧಾರ ಬಡಿಗೆ, ಸೊಂಟದ ಪಟ್ಟಿ, ಕೊರಳ ಪಟ್ಟಿ, ಮೊಣಕಾಲು ಪಟ್ಟಿ, ಮೊಣಕೈ ಪಟ್ಟಿ ಸೇರಿದಂತೆ ಇತರ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.

ಹಿರಿಯ ನಾಗರಿಕರು, ಅಂಗವಿಲಕರು ಹಾಗೂ ಇತರರಿಗೆ ಕೇಂದ್ರ ಸರ್ಕಾರದ ಅನೇಕ ಯೋಜನೆಗಳಿದ್ದು, ಅರ್ಹರು ಅವುಗಳ ಲಾಭ ಪಡೆಯಬೇಕು ಎಂದು ಸಲಕರಣೆ ವಿತರಣೆಗೆ ಚಾಲನೆ ನೀಡಿದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.

ADVERTISEMENT

ತಿಂಗಳ ಹಿಂದೆ ಪ್ರಧಾನಮಂತ್ರಿ ದಿವ್ಯಾಶಾ ಕೇಂದ್ರದಿಂದ ಸಲಕರಣೆಗಳ ವಿತರಣೆಗಾಗಿ ಮಂದಕನಳ್ಳಿ, ಕಂಗನಕೋಟ್, ಶಮಶೇರನಗರ, ಶಮಶೇರನಗರ ತಾಂಡಾ ಹಾಗೂ ಮಂದಕನಳ್ಳಿ ತಾಂಡಾದ 465 ಜನರ ತಪಾಸಣೆ ನಡೆಸಲಾಗಿತ್ತು. ಮೊದಲ ಹಂತದಲ್ಲಿ 203 ಜನರಿಗೆ ಸಲಕರಣೆಗಳನ್ನು ವಿತರಿಸಲಾಗಿದೆ, ಎರಡನೇ ಹಂತದಲ್ಲಿ ಉಳಿದವರಿಗೆ ವಿತರಿಸಲಾಗುವುದುಎಂದು ಬೀದರ್ ಮೈನಾರಿಟಿ ಸ್ಪೋಟ್ರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಬಾರಕ್ ಮಂದಕನಳ್ಳಿ

ಎಂ.ಡಿ. ಸಿರಾಜೊದ್ದೀನ್ ಚಿಂಚೋಳಿಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ನಾಗಭೂಷಣ ಕಮಠಾಣ, ಸಲೀಮುದ್ದೀನ್ ಚಿಂಚೋಳಿಕರ್, ಕುಮುದಾ, ನಯುಮ್ ಪಟೇಲ್, ಕಾಶೀನಾಥ ಗೌರಶೆಟ್ಟಿ, ರಮೇಶ ಶೆಟ್ಟಿಗುಂಡಿ, ಎಂ.ಡಿ. ರಿಯಾಜುದ್ದಿನ್ ಚಿಂಚೋಳಿಕರ್, ಗಂಗಾಧರ ಗೌರಶೆಟ್ಟಿ, ರಾಜು ಮುಕ್ತೆದಾರ್, ಸಚಿನ್ ಬಾವಿದೊಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.