ADVERTISEMENT

ಅಜೀಂ ಪ್ರೇಮ್‌ಜಿ ಫೌಂಡೇಶನ್‌ನಿಂದ ಜಿಲ್ಲೆಗೆ 50 ಆಕ್ಸಿಜನ್ ಜಂಬೊ ಸಿಲಿಂಡರ್

​ಪ್ರಜಾವಾಣಿ ವಾರ್ತೆ
Published 21 ಮೇ 2021, 15:29 IST
Last Updated 21 ಮೇ 2021, 15:29 IST
ಬೀದರ್‌ನಲ್ಲಿ ಶುಕ್ರವಾರ ಅಜೀಂ ಪ್ರೇಮ ಜಿ ಫೌಂಡೇಶನ್‌ನ ಬೀದರ್ ಜಿಲ್ಲಾ ಸಂಯೋಜಕ ಶಿವಕುಮಾರ ಅವರು ಜಿಲ್ಲಾಧಿಕಾರಿ ರಾಮಚಂದ್ರನ್‌ ಉಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಅವರಿಗೆ ಆಕ್ಸಿಜನ್ ಜಂಬೊ ಸಿಲಿಂಡರ್‌ಗಳ ಸರಬರಾಜು ಪತ್ರವನ್ನು ಹಸ್ತಾಂತರಿಸಿದರು

ಬೀದರ್‌: ಜಿಲ್ಲಾಡಳಿತದ ಮನವಿ ಮೇರೆಗೆ ಬೆಂಗಳೂರಿನ ಅಜೀಂ ಪ್ರೇಮ್‌ಜಿ ಫೌಂಡೇಶನ್‌ ಜಿಲ್ಲೆಗೆ 50 ಆಕ್ಸಿಜನ್ ಜಂಬೊ ಸಿಲಿಂಡರ್ಗಳನ್ನು ನೀಡಿದೆ.

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮೇ 21ರಂದು 50 ಆಕ್ಸಿಜನ್ ಜಂಬೊ ಸಿಲಿಂಡರ್‌ಗಳ ಸರಬರಾಜು ಪತ್ರವನ್ನು ಅಜೀಂ ಪ್ರೇಮ ಜಿ ಫೌಂಡೇಶನ್‌ನ ಬೀದರ್ ಜಿಲ್ಲಾ ಸಂಯೋಜಕ ಶಿವಕುಮಾರ ಅವರು ಜಿಲ್ಲಾಧಿಕಾರಿ ರಾಮಚಂದ್ರನ್‌ ಉಪಸ್ಥಿತಿಯಲ್ಲಿ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಅವರಿಗೆ ಹಸ್ತಾಂತರಿಸಿದರು.

ಕಳೆದ ವರ್ಷ ಅಜೀಂ ಪ್ರೇಮ್ ಜಿ ಫೌಂಡೇಶನ್ ಬೀದರ್ ಜಿಲ್ಲೆಗೆ ಏಳು ಸಾವಿರ ಎನ್95 ಮಾಸ್ಕ್ ಹಾಗೂ ಪಿಪಿಇಕಿಟ್‌ಗಳನ್ನು ನೀಡಿತ್ತು. ಪ್ರಸ್ತುತ 200ಆಕ್ಸಿಜನ್ ಕಾನ್ಸ್ಂಟ್ರೇಟರ್ಗಳನ್ನು ನೀಡಲು ನಿರ್ಧರಿಸಿದೆ ಎಂದು ಶಿವಕುಮಾರ ತಿಳಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಡಿಎಚ್‌ಒ ಡಾ.ವಿ.ಜಿ.ರೆಡ್ಡಿ, ಡಾ.ಮಹೇಶ ತೊಂಡಾರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.