ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿ: ಶರಣಪ್ಪ ಮಿಠಾರೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:09 IST
Last Updated 15 ಫೆಬ್ರುವರಿ 2021, 16:09 IST
ಬೀದರ್‌ನ ವಿ.ಕೆ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ತಂದೆ-ತಾಯಿಗಳ ಪೂಜೆ ದಿನ ಕಾರ್ಯಕ್ರಮದಲ್ಲಿ ಡಾ. ಸುರೇಂದ್ರ ರೋಡೆ, ಶರಣಪ್ಪ ಮಿಠಾರೆ, ಡಾ. ಲೋಕೇಶ ಹಿರೇಮಠ, ಪ್ರಕಾಶ ಜಿ. ಇದ್ದರು
ಬೀದರ್‌ನ ವಿ.ಕೆ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ತಂದೆ-ತಾಯಿಗಳ ಪೂಜೆ ದಿನ ಕಾರ್ಯಕ್ರಮದಲ್ಲಿ ಡಾ. ಸುರೇಂದ್ರ ರೋಡೆ, ಶರಣಪ್ಪ ಮಿಠಾರೆ, ಡಾ. ಲೋಕೇಶ ಹಿರೇಮಠ, ಪ್ರಕಾಶ ಜಿ. ಇದ್ದರು   

ಬೀದರ್: ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಬೇಕು ಎಂದು ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಹೇಳಿದರು.

ಯೋಗ ವೇದಾಂತ ಸೇವಾ ಸಮಿತಿಯ ವತಿಯಿಂದ ಇಲ್ಲಿಯ ವಿ.ಕೆ. ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಿದ್ದ ತಂದೆ-ತಾಯಿಗಳ ಪೂಜೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಂದೆ-ತಾಯಿ ಮಕ್ಕಳಿಗೆ ಹೆಚ್ಚಿನ ಸಮಯ ನೀಡಬೇಕು. ಅವರನ್ನು ಸಮಾಜಕ್ಕೆ ಕೊಡುಗೆ ನೀಡುವ ಪ್ರಜೆಯಾಗಿ ರೂಪಿಸಬೇಕು ಎಂದು ಸಲಹೆ ಮಾಡಿದರು.

ADVERTISEMENT

ಭಾರತೀಯ ಸಂಸ್ಕೃತಿ ಅನುಸರಿಸುವವರನ್ನು ಇಡೀ ವಿಶ್ವವೇ ಗೌರವಿಸುತ್ತದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಪ್ರಕಾಶ ಜಿ. ಹೇಳಿದರು.

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನದಂದು ತಂದೆ-ತಾಯಿಗಳ ಪೂಜೆ ದಿನ ಆಚರಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಯೋಗ ವೇದಾಂತ ಸೇವಾ ಸಮಿತಿಯ ಡಾ. ಸುರೇಂದ್ರ ರೋಡೆ ಮಾತನಾಡಿದರು. ಮಕ್ಕಳು ಪಾಲಕರ ಪಾದಪೂಜೆ ಮಾಡಿದರು. ಡಾ. ಲೋಕೇಶ ಹಿರೇಮಠ, ಸಂಜು ಪಾಟೀಲ ನ್ಯಾಮತಾಬಾದ್, ಸಿದ್ದು ಮಳಖೇಡ, ಅಶೋಕ ದಾರಾ, ದಿಲೀಪ್ ಗಾದಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.