ಚಿಟಗುಪ್ಪ: ತಾಲ್ಲೂಕಿನ ಮನ್ನಾಎಖ್ಖೇಳಿ ಗ್ರಾಮದಲ್ಲಿ ಮಂಗಳವಾರ ಮೂರು ಮನೆಗಳ ಬೀಗ ಮುರಿದು ಕಳ್ಳರು ನಗನಾಣ್ಯ, ಚಿನ್ನಾಭರಣ ಕದ್ದಿದ್ದಾರೆ.
ಗ್ರಾಮದ ಚಂದ್ರಕಾಂತ್ ಎಂಬುವರ ಮನೆಯ ಬೀಗ ಒಡೆದು ಮನೆಯಲ್ಲಿದ್ದ 2 ಗ್ರಾಂ ತೂಕದ ಬಂಗಾರದ ತಾಳಿ, ಅರ್ಧ ತೊಲಾ ಅಷ್ಟಪೈಲಿ ಗುಂಡು ಸರ ಸೇರಿ ಒಟ್ಟು ₹96 ಸಾವಿರ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ.
ಗ್ರಾಮದ ಮಹ್ಮದ್ ಇಬ್ರಾಹಿಂ ಮಹ್ಮದ್ ಸುಲ್ತಾನ್ ಅವರ ಮನೆಯ ಬೀಗ ಒಡೆದು ₹15 ಸಾವಿರ ನಗದು, ಚಿನ್ನದ ಲಾಕೆಟ್ ದೋಚಿದ್ದಾರೆ.
ಗ್ರಾಮದ ಗಣೇಶ್ ಮಾಣಿಕ ಅವರ ಮನೆಯ ಬೀಗ ಒಡೆದು 1 ತೊಲ ಚಿನ್ನದ ಸರ, ಅರ್ಧ ತೊಲ ಗುಂಡು ಸರ, 6 ಗ್ರಾಂ ತೂಕದ ಅಷ್ಟಮಣಿ ಸರ, 5 ತೊಲ ಬೆಳ್ಳಿ ಉಂಗುರ ಹಾಗೂ ₹1.95 ಲಕ್ಷ ನಗದು ದೋಚಿದ್ದಾರೆ.
ಮನ್ನಾಎಖ್ಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.