ADVERTISEMENT

ಸಂಭ್ರಮದ ಗೋಣಿರುದ್ರೇಶ್ವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2022, 4:56 IST
Last Updated 3 ಮಾರ್ಚ್ 2022, 4:56 IST
ಬಸವಕಲ್ಯಾಣದ ಬಟಗೇರಾದಲ್ಲಿ ಬುಧವಾರ ಗೋಣಿರುದ್ರೇಶ್ವರ ರಥೋತ್ಸವ ಜರುಗಿತು
ಬಸವಕಲ್ಯಾಣದ ಬಟಗೇರಾದಲ್ಲಿ ಬುಧವಾರ ಗೋಣಿರುದ್ರೇಶ್ವರ ರಥೋತ್ಸವ ಜರುಗಿತು   

ಬಸವಕಲ್ಯಾಣ: ತಾಲ್ಲೂಕಿನ ಬಟಗೇರಾದಲ್ಲಿ ಗೋಣಿರುದ್ರೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಬುಧವಾರ ರಥೋತ್ಸವ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಸಿದ ನಂತರ ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಜಯಘೋಷದ ಮಧ್ಯೆ ರಥ ಎಳೆಯಲಾಯಿತು. ವಾದ್ಯ ಮೇಳದವರು, ಪುರವಂತರು, ಭಜನಾ ತಂಡದವರು ಪಾಲ್ಗೊಂಡಿದ್ದರು. ರಥ ಎಳೆಯುವಾಗ ಭಕ್ತರು ರಥದ ಮೇಲೆ ಹಣ್ಣು, ನಾಣ್ಯ ಎಸೆದು ಭಕ್ತಿಯಿಂದ ನಮಿಸಿದರು.

ಪುರವಂತ ಶ್ರೀಮಂತ ಅಟ್ಟೂರ್ ಅವರ ಪುರವಂತ ಪ್ರದರ್ಶನ ಗಮನ ಸೆಳೆಯಿತು. ಗುರುಲಿಂಗಯ್ಯ ಶಾಸ್ತ್ರಿ ಹೂವಿನಹಳ್ಳಿ ಅವರು ಪೂಜೆ ನೆರವೆರಿಸಿ, ರಥ ಎಳೆಯುವುದಕ್ಕೆ ಚಾಲನೆ ನೀಡಿದರು. ಯುವಕರು ಉತ್ಸಾಹದಿಂದ ರಥ ಎಳೆದರು. ನಂತರ ಭಜನೆ, ಜಾಗರಣೆ ನಡೆಯಿತು. ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.