ಭಾಲ್ಕಿ: ಪಟ್ಟಣದ ಸದ್ಗುರು ವಿದ್ಯಾಲಯದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ವಿದ್ಯಾರ್ಥಿನಿ ಸೃಷ್ಟಿ. ಆರ್ (ಶೇ 97.60) ಪ್ರತಿಶತ ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಕ್ಷಯ ಎಸ್. ಮುದ್ದಾ ತಿಳಿಸಿದ್ದಾರೆ.
ಶುಶಾಂತ ಜೆ. (ಶೇ 92.96), ರೋಹಿಣಿ ಪಿ. (88.8), ಲಕ್ಷ್ಮಿ ಎಚ್., (88.16), ಬಸವಜ್ಯೋತಿ ವಿ. (87.2), ಪೂಜಾ ಪಿ. (86.24) ಅಂಕ ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಮುದ್ದಾ, ಆಡಳಿತಾಧಿಕಾರಿ ವೀರಣ್ಣಾ ಪರಸಣೆ, ರಾಜಕುಮಾರ ಮೇತ್ರೆ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.