ADVERTISEMENT

ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆ: ಸರ್ಕಾರಿ ಶಾಲೆ ಕಟ್ಟಡ ಕುಸಿತ, ತಪ್ಪಿದ ಅನಾಹುತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 6:51 IST
Last Updated 14 ಜುಲೈ 2022, 6:51 IST
ಔರಾದ್ ತಾಲ್ಲೂಕಿನ ಕರಂಜಿ (ಬಿ) ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದಿದೆ.
ಔರಾದ್ ತಾಲ್ಲೂಕಿನ ಕರಂಜಿ (ಬಿ) ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದಿದೆ.   

ಔರಾದ್ (ಬೀದರ್ ಜಿಲ್ಲೆ): ಮಳೆಗೆ ತಾಲ್ಲೂಕಿನ ಕರಂಜಿ (ಬಿ) ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಭಾರಿ ಅನಾಹುತ ತಪ್ಪಿದೆ.

ಕಳೆದ ನಾಲ್ಕು ದಿನಗಳಿಂದ ಸತತ ಮಳೆ ಸುರಿಯುತ್ತಿರುವುದರಿಂದ ಮಣ್ಣಿನ ಮನೆ ಹಾಗೂ ಹಳೆ ಕಟ್ಟಡಗಳಿಗೆ ಅಪಾಯ ಎದುರಾಗಿದೆ.

ಧವಾರ ಶಾಲೆ ಬಿಟ್ಟ ನಂತರ ಏಕಾಏಕಿ ಶಾಲೆ ಕಟ್ಟಡ ಕುಸಿದಿದೆ. ಇದರಿಂದಾಗಿ ಕೆಲವೇ ಗಂಟೆಗಳ ನಂತರದಲ್ಲಿ ಭಾರಿ ಅವಘಡ ತಪ್ಪಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕರಂಜಿ ಶಾಲೆ ಕಟ್ಟಡ ಕುಸಿದ ಮಾಹಿತ ಪಡೆಯಲಾಗಿದೆ. ಅಂತಹ ಅಪಾಯ ಇರುವ‌ ಮಟ್ಟದಲ್ಲಿ ‌ಮಕ್ಕಳನ್ನು ಕೂಡಿಸಬಾರದು ಎಂದು ಎಲ್ಲ ಶಾಲೆ ಮುಖ್ಯ ಶಿಕ್ಷಕರಿಗೆ ಲಿಖಿತ ಆದೇಶ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ನಗನೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.