ADVERTISEMENT

ಬೀದರ್‌ ಜಿಲ್ಲೆಯಲ್ಲಿ ಅರ್ಧಗಂಟೆ ಅಬ್ಬರಿಸಿದ ಮಳೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 13:53 IST
Last Updated 12 ಅಕ್ಟೋಬರ್ 2020, 13:53 IST
ಬೀದರ್‌ನ ಜನವಾಡ ರಸ್ತೆಯ ಗ್ರಾಮೀಣ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಿಂದ ಇಳಿದ ಪ್ರಯಾಣಿಕರು ಮಳೆಯಿಂದ ರಕ್ಷಣೆ ಪಡೆಯಲು ನಿಲ್ದಾಣದತ್ತ ಓಡಿದರು
ಬೀದರ್‌ನ ಜನವಾಡ ರಸ್ತೆಯ ಗ್ರಾಮೀಣ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಿಂದ ಇಳಿದ ಪ್ರಯಾಣಿಕರು ಮಳೆಯಿಂದ ರಕ್ಷಣೆ ಪಡೆಯಲು ನಿಲ್ದಾಣದತ್ತ ಓಡಿದರು   

ಬೀದರ್: ಬೀದರ್, ಭಾಲ್ಕಿ ಹಾಗೂ ಹುಮನಾಬಾದ್‌ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ಸೋಮವಾರ ಮಧ್ಯಾಹ್ನ ಮಳೆ ಅಬ್ಬರಿಸಿದೆ.

ಬೀದರ್‌ ನಗರದಲ್ಲಿ ಬೆಳಿಗ್ಗೆ ಮಂಜು ಮಿಶ್ರಿತ ಮಳೆ ಇತ್ತು. ಮಧ್ಯಾಹ್ನ ದಟ್ಟ ಮೋಡಗಳು ಆವರಿಸಿ ಅರ್ಧಗಂಟೆ ಮಳೆ ಅಬ್ಬರಿಸಿತು. ಓಲ್ಡ್‌ಸಿಟಿಯ ಮಾರುಕಟ್ಟೆ ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ನೀರು ರಸ್ತೆ ಮೇಲೆ ನಿಂತುಕೊಂಡಿತ್ತು. ತಗ್ಗು ಪ್ರದೇಶದಲ್ಲಿರುವ ಕೆಲ ಮನೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು.

ಬೊಮ್ಮಗೊಂಡೇಶ್ವರ ವೃತ್ತ ಸಮೀಪ ರೈಲ್ವೆ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲೂ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು. ರೋಟರಿ ವೃತ್ತ ಹಾಗೂ ಕೆಇಬಿ ಕಚೇರಿ ಮುಂಭಾಗದ ರಸ್ತೆ ಮೇಲೂ ನೀರು ನಿಂತುಕೊಂಡಿತ್ತು. ಸಂಜೆಯ ವೇಳೆಗೆ ನೀರು ಹರಿದು ಹೋಗಿ ಸಂಚಾರ ಸುಗಮಗೊಂಡಿತು. ಭಾಲ್ಕಿ, ಹುಮನಾಬಾದ್‌ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಸಾಧಾರಣ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.