ADVERTISEMENT

ಬೀದರ್‌ ಜಿಲ್ಲೆಯಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 15:14 IST
Last Updated 21 ಸೆಪ್ಟೆಂಬರ್ 2024, 15:14 IST
   

ಬೀದರ್‌: ಸೆಪ್ಟೆಂಬರ್‌ ಮೊದಲ ವಾರದಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮೂರನೇ ವಾರ ಮತ್ತೆ ಆಗಮಿಸಿದ್ದಾನೆ.

ಶುಕ್ರವಾರ ರಾತ್ರಿ ಅಬ್ಬರಿಸಿದ ಮಳೆ ಶನಿವಾರ ಕೂಡ ಜೋರಾಗಿ ಬಿದ್ದಿದೆ. ಶುಕ್ರವಾರ ತಡರಾತ್ರಿ ವರೆಗೆ ಉತ್ತಮ ಮಳೆಯಾಗಿತ್ತು. ಶನಿವಾರ ಬೆಳಿಗ್ಗೆ ಹತ್ತು ಗಂಟೆಯ ವರೆಗೆ ಬಿಡುವು ಕೊಟ್ಟಿತ್ತು. ಆದರೆ, ದಟ್ಟ ಕಾರ್ಮೋಡ ಆವರಿಸಿಕೊಂಡಿತ್ತು. ಆನಂತರ ಹತ್ತರಿಂದ ಮಧ್ಯಾಹ್ನ 12ರ ವರೆಗೆ ಬಿರುಸಿನ ವರ್ಷಧಾರೆಯಾಯಿತು. ಪುನಃ ಸಂಜೆ 5ರಿಂದ 6ರ ವರೆಗೆ ಮಳೆ ಸುರಿದಿದೆ.

ಜಿಲ್ಲೆಯ ಬೀದರ್‌, ಕಮಲನಗರ, ಹುಲಸೂರ, ಭಾಲ್ಕಿ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.