ADVERTISEMENT

ಹುಮನಾಬಾದ್| ನಿವೃತ್ತ ಸೈನಿಕರ ಕಷ್ಟಕ್ಕೆ ಸ್ಪಂದಿಸಿ: ಅಮೃತರಾವ್ ರಾಜೇಶ್ವರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:55 IST
Last Updated 19 ಜನವರಿ 2026, 5:55 IST
ಹುಮನಾಬಾದ್ ಪಟ್ಟಣದಲ್ಲಿ ಆಯೋಜಿಸಿದ್ದ 78ನೇ ಸೇನಾ ದಿನ ಕಾರ್ಯಕ್ರಮಕ್ಕೆ ಗಣ್ಯರು ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು
ಹುಮನಾಬಾದ್ ಪಟ್ಟಣದಲ್ಲಿ ಆಯೋಜಿಸಿದ್ದ 78ನೇ ಸೇನಾ ದಿನ ಕಾರ್ಯಕ್ರಮಕ್ಕೆ ಗಣ್ಯರು ಸಸಿಗೆ ನೀರು ಎರೆಯುವ ಮೂಲಕ ಚಾಲನೆ ನೀಡಿದರು   

ಹುಮನಾಬಾದ್: ನಿವೃತ್ತ ಸೈನಿಕರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ನಿವೃತ್ತ ಸೈನಿಕರ ಸಂಸ್ಥೆಯ ಅಧ್ಯಕ್ಷ ಅಮೃತರಾವ್ ರಾಜೇಶ್ವರ ಹೇಳಿದರು.

ಪಟ್ಟಣದಲ್ಲಿ ಜಯಸಿಂಹ ಜನಗರದ ನಿವೃತ್ತ ಸೈನಿಕರ ಸಂಸ್ಥೆಯಿಂದ ಆಯೋಜಿಸಿದ್ದ 78ನೇ ಸೇನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‌

ಮಾಜಿ ಸೈನಿಕರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವು ಯೋಜನೆ ಹಾಗೂ ಸೌಲಭ್ಯಗಳನ್ನು ಕಲ್ಪಿಸಿದೆ. ಅವುಗಳನ್ನು ದೊರಕಿಸುವ ನಿಟ್ಟಿನಲ್ಲಿ ಇಲ್ಲಿಯ ಅಧಿಕಾರಿಗಳು ಶ್ರಮಿಸಬೇಕು ಎಂದರು.

ADVERTISEMENT

ಈ ಸಂದರ್ಭದಲ್ಲಿ ವೆಂಕಟ್ ರಾವ್ ತೇಲಂಗ, ಬಾಬುರಾವ್ ಸೂರ್ಯವಂಶಿ, ನಿಂಗಪ್ಪ ಚಿಂಚೋಳ್ಳಿಕರ್, ಅಮೂಲ ಕುಲಕರ್ಣಿ, ವಿಠಲರಾಲ್ ರಾಜೇಶ್ವರ, ಅಶೋಕ್ ಕುಮಾರ್ ಪಾಟೀಲ, ಹನುಮಂತ ದೇವಣಿ, ವೈಜಿನಾಥ ಬಿರಾದರ್, ಕಲ್ಪಪ್ಪ ಮಾಶಟ್ಟಿ, ವಿಜಯಕುಮಾರ್ ಪರಶಟ್ಟಿ, ಮಂಜುಳಾ ಧರ್ಮರಾವ್, ಸುನೀತಾ ಶಾಮರಾವ್ ಸೇರಿದಂತೆ ಇತರರು ಇದ್ದರು.

ಪಥಸಂಚಲನ: ಜಯಸಿಂಹ ನಗರದ ನಿವೃತ್ತ ಸೈನಿಕರ ಸಂಸ್ಥೆಯಿಂದ ಪತ ಸಂಚಲನ ಜರುಗಿತು.‌ ಇಲ್ಲಿಯ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡು ಬಸವೇಶ್ವರ ವೃತ್ತದ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.‌ಆರ್.‌ ಬಿ. ಅಂಬೇಡ್ಕರ್ ವೃತ್ತದ ಮುಖಾಂತರ ಬೀದರ್ ರಸ್ತೆಯ ಶಿವಾಜಿ ಮಹಾರಾಜರ ವೃತ್ತದವರೆಗೆ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.