ADVERTISEMENT

ಬೀದರ್: 40ಕ್ಕೂ ಹೆಚ್ಚು ವಾಹನಗಳಲ್ಲಿ ಹೈದರಾಬಾದ್ ಲಿಂಗಾಯತ ರ‍್ಯಾಲಿಗೆ ಪಯಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 6:54 IST
Last Updated 4 ಜೂನ್ 2023, 6:54 IST
   

ಬೀದರ್: ಹೈದರಾಬಾದ್ ನಲ್ಲಿ ಹಮ್ಮಿಕೊಂಡಿರುವ ಲಿಂಗಾಯತ ಮಹಾ ರ‍್ಯಾಲಿಗೆ ನಗರದಿಂದ 40ಕ್ಕೂ ಹೆಚ್ಚು ವಾಹನಗಳಲ್ಲಿ ಲಿಂಗಾಯತರು ಭಾನುವಾರ ಬೆಳಿಗ್ಗೆ ತೆರಳಿದರು.

ನಗರದ ನೆಹರೂ ಕ್ರೀಡಾಂಗಣ ಸಮೀಪದ ಸಾಯಿ ಶಾಲೆ ಮೈದಾನದಲ್ಲಿ ವಿವಿಧ ಕಡೆಗಳಿಂದ ಬಂದಿದ್ದ ಲಿಂಗಾಯತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಹೈದರಾಬಾದ್‌ಗೆ ತೆರಳಲು ಉಚಿತ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲ ವಾಹನಗಳಿಗೆ ಪೂಜೆ ಸಲ್ಲಿಸಿ, ಷಟಸ್ಥಲ ಧ್ವಜ ಕಟ್ಟಿಕೊಂಡು, ನಗರದ ಪ್ರಮುಖ ರಸ್ತೆಗಳಲ್ಲಿ ರ‍್ಯಾಲಿ ನಡೆಸಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಿ, ಜಯಘೋಷ ಹಾಕುತ್ತ ಹೈದರಾಬಾದ್‌ನತ್ತ ಮುಖ ಮಾಡಿದರು.

ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಔರಾದ್, ಹುಮನಾಬಾದ್ ಸೇರಿದಂತೆ ಇತರೆ ಕಡೆಗಳಿಂದಲೂ ಲಿಂಗಾಯತರು ರ‍್ಯಾಲಿಗೆ ತೆರಳಿದರು. ಎಲ್ಲರೂ ತೆಲಂಗಾಣ ಗಡಿಯ ಜಹೀರಾಬಾದ್‌ನಲ್ಲಿ ಸೇರಿ ಶಕ್ತಿ ಪ್ರದರ್ಶನದೊಂದಿಗೆ ಹೈದರಾಬಾದ್ ಗೆ ತೆರಳಲು ನಿರ್ಧರಿಸಿದ್ದಾರೆ.

ADVERTISEMENT

‘ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಆಗ್ರಹಿಸಿ ಹೈದರಾಬಾದ್ ನಲ್ಲಿ 24ನೇ ಮಹಾ ರ‍್ಯಾಲಿ ಭಾನುವಾರ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದೆ. ದಕ್ಷಿಣದ ವಿವಿಧ ರಾಜ್ಯಗಳ ಮಠಾಧೀಶರು, ಬಸವ ಭಕ್ತರು ಪಾಲ್ಗೊಳ್ಳುವರು‘ ಎಂದು ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.

ಮುಖಂಡರಾದ ರಮೇಶ ಪಾಟೀಲ, ಬಾಬುವಾಲಿ, ಆನಂದ ದೇವಪ್ಪ, ರಾಜೇಂದ್ರ ಗಂದಗೆ, ರಾಜೇಂದ್ರ ಜೊನ್ನಿಕೇರಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.