ADVERTISEMENT

ಐಎಂಎ ನೂತನ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 14:19 IST
Last Updated 6 ಅಕ್ಟೋಬರ್ 2021, 14:19 IST
ಬೀದರ್‌ನ ಐಎಂಎ ಹಾಲ್‍ನಲ್ಲಿ ನಡೆದ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಘದ ನೂತನ ಅಧ್ಯಕ್ಷ ಡಾ. ವಿನೋದ ಸಾವಳಗಿ ಮಾತನಾಡಿದರು. ಡಾ. ವಿ.ವಿ. ನಾಗರಾಜ, ಡಾ. ಸತೀಶ ಮುಡಬಿ, ಡಾ.ಚಂದ್ರಕಾಂತ ಚಿಲ್ಲರ್ಗಿ, ಡಾ. ಚಂದ್ರಶೇಖರ ಪಾಟೀಲ, ಡಾ. ಚಂದ್ರಶೇಖರ ಎಮ್ಮೆ, ಡಾ. ರಾಜಶೇಖರ ಸೇಡಂಕರ್, ಡಾ. ಪಲ್ಲವಿ ಮಠಪತಿ ಇದ್ದರು

ಬೀದರ್: ಭಾರತೀಯ ವೈದ್ಯಕೀಯ ಸಂಘ(ಐಎಎಂ)ದ ಬೀದರ್ ಶಾಖೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಲ್ಲಿಯ ಜೆಸ್ಕಾಂ ಕಚೇರಿ ಹತ್ತಿರದ ಐಎಂಎ ಹಾಲ್‍ನಲ್ಲಿ ನಡೆಯಿತು.

ಸಂಘದ ಚಟುವಟಿಕೆಗಳಿಗೆ ತಮ್ಮ ಸಹಕಾರ ಸದಾ ಇರಲಿದೆ ಎಂದು ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಹೇಳಿದರು.

ಬ್ರಿಮ್ಸ್ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ, ಸಂಘದ ನೂತನ ಅಧ್ಯಕ್ಷ ಡಾ. ವಿನೋದ ಸಾವಳಗಿ ಮಾತನಾಡಿದರು.

ADVERTISEMENT

ಸಂಘದ ಉಪಾಧ್ಯಕ್ಷರಾದ ಡಾ. ರಾಜಶೇಖರ ಸೇಡಂಕರ್, ಡಾ. ಪಲ್ಲವಿ ಮಠಪತಿ, ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಎಮ್ಮೆ, ಖಜಾಂಚಿ ಡಾ. ಮಹೇಶ ತೊಂಡಾರೆ, ನಿಕಟಪೂರ್ವ ಅಧ್ಯಕ್ಷ ವಿ.ವಿ. ನಾಗರಾಜ, ನಿಕಟಪೂರ್ವ ಕಾರ್ಯದರ್ಶಿ ಡಾ. ಸತೀಶ ಮುಡಬಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.