ADVERTISEMENT

ಜಿ ರಾಮ್‍ ಜಿ ಜಾರಿಯಿಂದ ಭ್ರಷ್ಟರಿಗೆ ಭಯ: ಶಾಸಕ ಪ್ರಭು ಬಿ. ಚವಾಣ್

ಕಮಲನಗರದಲ್ಲಿ ವಿಬಿ ಜಿರಾಮ್‍ಜಿ ಜನಜಾಗೃತಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:21 IST
Last Updated 19 ಫೆಬ್ರುವರಿ 2026, 4:21 IST
<div class="paragraphs"><p>ಬಿಜೆಪಿ ಔರಾದ್‌(ಬಿ) ಮಂಡಲದ ವತಿಯಿಂದ ಬುಧವಾರ ಕಮಲನಗರ ಪಟ್ಟಣದ ಎಂ.ಎ ಬಿರಾದಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಬಿ-ಜಿ ರಾಮ್‍ ಜಿ ಯೋಜನೆಯ ಜನಜಾಗೃತಿ ಅಭಿಯಾನವನ್ನು ಶಾಸಕ ಪ್ರಭು ಬಿ. ಚವಾಣ್ ಉದ್ಘಾಟಿಸಿದರು</p></div>

ಬಿಜೆಪಿ ಔರಾದ್‌(ಬಿ) ಮಂಡಲದ ವತಿಯಿಂದ ಬುಧವಾರ ಕಮಲನಗರ ಪಟ್ಟಣದ ಎಂ.ಎ ಬಿರಾದಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಬಿ-ಜಿ ರಾಮ್‍ ಜಿ ಯೋಜನೆಯ ಜನಜಾಗೃತಿ ಅಭಿಯಾನವನ್ನು ಶಾಸಕ ಪ್ರಭು ಬಿ. ಚವಾಣ್ ಉದ್ಘಾಟಿಸಿದರು

   

ಕಮಲನಗರ: ‘ಮನರೇಗಾ ಯೋಜನೆಯ ಮೂಲಕ ಸರ್ಕಾರವನ್ನು ಲೂಟಿ ಮಾಡುತ್ತಿದ್ದ ಭ್ರಷ್ಟರಿಗೆ ವಿಬಿ ಜಿರಾಮ್‍ಜಿ ಜಾರಿಯಿಂದಾಗಿ ಭಯ ಹುಟ್ಟಿಕೊಂಡಿದೆ’ ಎಂದು ಶಾಸಕ ಪ್ರಭು ಬಿ. ಚವಾಣ್ ಹೇಳಿದರು.

ಭಾರತೀಯ ಜನತಾ ಪಕ್ಷ ಔರಾದ್(ಬಿ) ಮಂಡಲದ ವತಿಯಿಂದ ಬುಧವಾರ ಕಮಲನಗರ ಪಟ್ಟಣದ ಎಂ.ಎ ಬಿರಾದಾರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ವಿಬಿ-ಜಿರಾಮ್‍ಜಿ ಯೋಜನೆಯ ಜನಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಕೆಲವರು ಮನರೇಗಾ ಮೂಲಕ ಗ್ರಾಮೀಣ ಭಾಗದ ಜನತೆಗೆ ಉದ್ಯೋಗದ ಭರವಸೆ ನೀಡಿ ಭ್ರಷ್ಟಾಚಾರಕ್ಕೆ ಹಾದಿ ಮಾಡಿಕೊಂಡಿದ್ದರು. ಸರಿಯಾದ ಸಮಯಕ್ಕೆ ಉದ್ಯೋಗಗಳು ಕೊಡುತ್ತಿರಲಿಲ್ಲ. ಸಕಾಲಕ್ಕೆ ಕೂಲಿ ಹಣ ಪಾವತಿಸುತ್ತಿರಲಿಲ್ಲ. ಬೋಗಸ್ ಬಿಲ್ಲುಗಳನ್ನು ಸೃಷ್ಟಿಸಿ ಸರ್ಕಾರದ ಹಣ ದುರ್ಬಳಕೆ ಮಾಡುವುದು ವಿಪರೀತವಾಗಿ ನಡೆಯುತ್ತಿತ್ತು. ಇದನ್ನು ಗಮನಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಯೋಜನೆಯನ್ನು ವಿಬಿ ಜಿರಾಮ್‍ಜಿ ಎಂದು ಬದಲಾಯಿಸಿ ಅಕ್ರಮಗಳ ತಡೆಗೆ ಸಾಕಷ್ಟು ಸುಧಾರಣೆಗಳನ್ನು ತಂದಿದ್ದು, ಯೋಜನೆ ಸಂಪೂರ್ಣ ಪಾರದರ್ಶಕವಾಗಿದೆ’ ಎಂದರು.

‘ಕೇಂದ್ರ ಸರ್ಕಾರದ ಜನಹಿತ ಕೆಲಸವನ್ನು ಸಹಿಸದ ಕಾಂಗ್ರೆಸ್‍ನವರು ಇಲ್ಲ ಸಲ್ಲದ ಸುಳ್ಳುಗಳನ್ನು ಹೇಳುತ್ತಾ ಜನರಲ್ಲಿ ಗೊಂದಲವುಂಟು ಮಾಡಲು ಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇದಕ್ಕೆಂದೇ ವಿಶೇಷ ಅಧಿವೇಶವನ್ನು ನಡೆಸಿದೆ. ವಿಬಿ ಜಿರಾಮ್‍ಜಿ ಯೋಜನೆಯ ಅನುಕೂಲತೆಗಳ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ಮುಖಂಡ ಗುರುನಾಥ ಜ್ಯಾಂತಿಕರ್ ಮಾತನಾಡಿ, ‘ಕಾಂಗ್ರೆಸ್‍ಗೆ ಮಹಾತ್ಮ ಗಾಂಧೀಜಿಯ ಬಗ್ಗೆ ಯಾವುದೇ ರೀತಿಯ ಅಭಿಮಾನವಿಲ್ಲ. ಕೇವಲ ಜನರಲ್ಲಿ ಗೊಂದಲ ಹುಟ್ಟಿಸಲೆಂದೇ ವಿಬಿ-ಜಿರಾಮ್‍ಜಿ ಯೋಜನೆಯ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಹೇಳಿದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಕೌಟಗೆ, ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರಿಹಂತ ಸಾವಳೆ, ಪ್ರಧಾನ ಕಾರ್ಯದರ್ಶಿ ಕಿರಣ ಪಾಟೀಲ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ರೈತ ಮೋರ್ಚಾ ಅಧ್ಯಕ್ಷ ಶಿವರಾಜ ಅಲ್ಮಾಜೆ, ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಾಕೀರ್ ಶೇಖ್, ಮಹಿಳಾ ಮೋರ್ಚಾ ಅಧ್ಯಕ್ಷೆ ಶಕುಂತಲಾ ಮುತ್ತಂಗೆ, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಮಹೇಶ ಸಜ್ಜನ್, ಮುಖಂಡರಾದ ಧೊಂಡಿಬಾ ನರೋಟೆ, ವಸಂತ ಬಿರಾದಾರ, ಸತೀಶ ಪಾಟೀಲ, ರಂಗರಾವ ಜಾಧವ, ಶಿವಾನಂದ ವಡ್ಡೆ ಸೇರಿದಂತೆ ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಬೂತ್ ಅಧ್ಯಕ್ಷರು, ಶಕ್ತಿ ಕೇಂದ್ರ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಂಡಲ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.